ಏಕರೂಪ ಗುರುತಿನ ಚೀಟಿಗೆ ಆಗ್ರಹ

Updated on: 

ಮಂಡ್ಯ: ಅಂಗವಿಕಲರಿಗೆ ಕನಿಷ್ಠ ಮಾಸಿಕ ಪೋಷಣಾ ಭತ್ಯೆ ಮತ್ತು ಏಕರೂಪ ಗುರುತಿನ ಚೀಟಿ ವಿತರಣೆಗೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ವನದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಹೊರಟ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಅಂಗವಿಕಲರಿಗೆ ಪ್ರತಿ ತಿಂಗಳು ನೀಡುತ್ತಿರುವ 500 ರು. ಪೋಷಣಾ ಭತ್ಯೆ ಸಾಲದಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವಂತೆ ಕನಿಷ್ಠ ಶೇ.40 ರಿಂದ ಶೇ.70ರಷ್ಟು ಅಂಗವೈಕಲ್ಯವಿದ್ದವರಿಗೆ 3 ಸಾವಿರ ರು. ನೀಡುವಂತೆ ಒತ್ತಾಯಿಸಿದರು.ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯರಾದವರಿಗೆ ಮಾಸಿಕ 5 ಸಾವಿರ ರು. ನೀಡುವುದು. ಅಂಗವಿಕಲರು ಎಲ್ಲಾ ಯೋಜನೆ, ಸವಲತ್ತು, ಬಸ್, ರೈಲು ಪಾಸ್, ಉದ್ಯೋಗ, ಶಿಕ್ಷಣ ಸೌಲಭ್ಯ ಇತ್ಯಾದಿಗಳನ್ನು ಪಡೆಯಲು ಏಕರೂಪ ಗುರುತಿನ ಚೀಟಿ ನೀಡುವಂತೆ ಆಗ್ರಹಿಸಿದರು.
ಒಕ್ಕೂಟದ  ಉಪಾಧ್ಯಕ್ಷೆ ಸಿ.ಕುಮಾರಿ, ಸಂಚಾಲಕ ಎಚ್.ಎಸ್. ಮಲ್ಲೇಶ್, ಜಿಲ್ಲಾ   ಕಾರ್ಯದರ್ಶಿ  ಗಿರೀಗೌಡ, ಕುಮಾರ್, ದೊಡ್ಡಮರಿಗೌಡ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com