ನಂಜನಗೂಡಿನಲ್ಲಿ ಶಂಕರ ಜಯಂತಿ

Updated on: 

ನಂಜನಗೂಡು: ಜಗತ್ತಿನ ನಶ್ವರತೆಯ ದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸರಳ ರೀತಿಯಲ್ಲಿ ಅರ್ಥೈಸಿದ ಆದರ್ಶ ವ್ಯಕ್ತಿ ಶಂಕರಾಚಾರ್ಯರು ಎಂದು ರಾಜ್ಯ ಬ್ರಾಹ್ಮಣ ಮಹಾಸಭಾದ ಉಪಸಭಾಪತಿ ಕೆ.ಆರ್. ಮೋಹನ್‌ಕುಮಾರ್ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ಬುಧವಾರ ಸಮಾಜ ಸೇವಾ ಧುರೀಣರಿಗೆ ಸಮಾಜ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಕಿರಿಯ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಎರಡು ಬಾರಿ ಭರತ ಖಂಡದ ಪರ್ಯಟನೆ ನಡೆಸಿ, ಹಿಂದೂ ಧರ್ಮದ ಉಳಿವಿಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ ಶಂಕರಾಚಾರ್ಯರು ದೈವ ಮಾಡಬೇಕಾದ ಕಾರ್ಯವನ್ನು ಮಾನವ ಸ್ವರೂಪದಲ್ಲಿ ಮಾಡಿದ ಮೇರು ಚೇತನ ಎಂದು ಅವರು ತಿಳಿಸಿದರು.
ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎನ್.ಎ. ಸದಾಶಿವು ಮಾತನಾಡಿದರು. ಶ್ರೀಮಠದ ಧರ್ಮಾಧಿಕಾರಿ ಎನ್.ಸಿ. ಶ್ರೀಕಂಠ ಜೋಯಿಸ್ ಜಯಂತಿ ಮಹೋತ್ಸವ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೆ ವೇಳೆ ವೇ.ಬ್ರ. ವಿಶ್ವೇಶ್ವರ ಜೋಯಿಸ್ ಹಾಗೂ ಬಿ.ವಿ. ಪಂಡಿತರ ಪುತ್ರರಾದ ವೇ.ಬ್ರ. ಬಿ.ವಿ ವೆಂಕಟೇಶ ಮೂರ್ತಿ ಅವರಿಗೆ ಸಮಾಜಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟರಾಜ ನಾಟ್ಯ ಶಾಲೆಯ ರಮ್ಯಾ ರಾಘವೇಂದ್ರ ತಂಡವರಿಂದ ಮೂಡಿಬಂದ ಉತ್ತಮ ಭರತನಾಟ್ಯ ನೆರೆದವರಲ್ಲಿ ಮುದ ನೀಡಿತು. ಐದು ದಿನಗಳ ಕಾಲ ನಡೆದ ಅನ್ನ ದಾಸೋಹದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಬುಧವಾರ ಬೆಳಗ್ಗೆ ಆದಿ ಶಂಕರರ ಉತ್ಸವ ಮತ್ತು ಶ್ರೀಮಠದಲ್ಲಿ ಶ್ರೀಕಂಠೇಶ್ವರ ಸ್ವಾಮಿಯವರ ಮಂಟಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಅರ್ಚಕ ವೇ.ಬ್ರ. ರಾಘವೇಂದ್ರ, ಮಾಜಿ ಧರ್ಮದರ್ಶಿ ಸುರೇಶ್, ಎನ್.ಎಸ್. ಸುಬ್ರಹ್ಮಣ್ಯ, ಇ. ರಾಮ್ ಮೋಹನ್, ಆರ್.ಗೋವರ್ಧನ್, ಸತೀಶ್, ಗೋಪೀನಾಥ್, ಅಶ್ವಥ್ ನಾರಾಯಣ್, ಭಕ್ತವತ್ಸಲ, ವಕೀಲ ತಾರಕಾರಾಮನ್, ಶಿವಕುಮಾರ್, ಎಸ್.ಉಮೇಶ್, ಜಯಂತಿ, ವಿಜಯ, ರಮಾ ಮಣಿಯಾಳ್, ಪದ್ಮ ಶ್ರೀನಿವಾಸ್, ಮುರುಳಿ, ವಿಜಿಯಾ ಸುಂದರ್, ಜಯಶ್ರೀ ಶ್ರೀಕಂಠ ಜೋಯಿಸ್ ಇದ್ದರು.

ಸಚಿವ ಸ್ಥಾನ ನೀಡಲು ಆಗ್ರಹ
ನಂಜನಗೂಡು: ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ತಾ. ಉಪ್ಪಾರ ಸಮಾಜದ ಅಧ್ಯಕ್ಷ ಮಹದೇವು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಉಪ್ಪಾರ ಸಮಾಜದ 37 ಲಕ್ಷಕ್ಕೂ ಅಧಿಕ ಜನರನ್ನು ಪ್ರತಿನಿಧಿಸುವ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿದರೆ ಸಮುದಾಯದ ಉನ್ನತಿಗೆ ಸಹಕಾರಿಯಾಗುತ್ತದೆ. ಕಳೆದ ವಿಧಾನಸಭಾ ಚುನವಣೆಯಲ್ಲಿ ಉಪ್ಪಾರ ಸಮಾಜ ನಂಜನಗೂಡು, ವರುಣ ಸೇರಿದಂತೆ ರಾಜ್ಯದ ಇತರೆಡೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಿದೆ ಎಂದು ಹೇಳಿದರು. ತಾ. ಅಧ್ಯಕ್ಷ ಮಹದೇವ್, ಗೌರವಾಧ್ಯಕ್ಷ ಮೂಗಶೆಟ್ಟಿ, ತಾಪಂ ಸದಸ್ಯೆ ಲಕ್ಷ್ಮೀ ನಾಗರಾಜು, ಪುರಸಭಾ ಸದಸ್ಯ ನಿಂಗಪ್ಪ, ಮುಖಂಡರಾದ ಅಣ್ಣಯ್ಯಶೆಟ್ಟಿ, ಹುಂಡಿ ಮಹದೇವು, ಬಾಲಚಂದ್ರ, ಸಿದ್ದಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com