ಕ.ಪ್ರ. ವಾರ್ತೆ, ಎಚ್.ಡಿ. ಕೋಟೆ, ಜು. 28
ಮನುಕುಲ ಸ್ನೇಹಪರತೆಯೊಂದಿಗೆ ತನ್ನ ಸಾಧನೆಗಳನ್ನು ಪ್ರಾಮಾಣಿಕವಾಗಿ ಸಮಾಜಕ್ಕೆ ರೋಟರಿ ಕ್ಲಬ್ ನೀಡುತ್ತಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ. ಲಕ್ಷ್ಮೀನಾರಾಯಣ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರೋಟರಿ ಕ್ಲಬ್ನ 2014-15ನೇ ಸಾಲಿನ ನೂತನ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರನ್ನಾಗಿ ಎನ್.ಎಸ್. ಕೃಷ್ಣ ಎಲ್ಐಸಿ ಅವರಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿದ ಅವರು, ಮನುಜನಲ್ಲಿರುವ ಸಂಪನ್ಮೂಲ ಕ್ರೂಡೀಕರಿಸಿ ಜನಜೀವನಕ್ಕೆ ಹಂಚುವ ಮೂಲಕ ಇತರರ ಜೀವನದಲ್ಲಿಯೂ ಹಣತೆಯನ್ನು ಬೆಳಗಿಸುವ ಮೂಲಕ ರೋಟರಿ ಎಂಬ ಸಂಸ್ಥೆಯನ್ನು ಮುನ್ನಡೆಸಿರಿ ಎಂದು ತಿಳಿಸಿದರು.
ನೂತನವಾಗಿ ರೋಟರಿ ಕ್ಲಬ್ನ ಅಧ್ಯಕ್ಷರಾಗಿ ಎಲ್ಐಸಿ ಕೃಷ್ಣ ಪದವಿ ಸ್ವೀಕರಿಸಿದರು. ಸಹಾಯಕ ರಾಜ್ಯಪಾಲ ಎಂ.ಎಸ್.ಜಯಪ್ರಕಾಶ್, ನೂತನ ಕಾರ್ಯದರ್ಶಿ ಬಿ.ಪಿ. ನಾಗರಾಜ್ ಮಾತನಾಡಿದರು.
ಇದೇ ವೇಳೆ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕ ಪಳನೀಸ್ವಾಮಿ, ಪತ್ರಕರ್ತ ಮಂಜುಕೋಟೆ, ಎಚ್.ಮಟಕೆರೆ ಗ್ರಾಮದ ದಾದಿಯಾಗಿ ಸೇವೆ ಸಲ್ಲಿಸುತ್ತಿರುವ ಯಶೋಧ ಹಾಗೂ ಕ್ಷಯ ರೋಗ ನಿವಾರಣೆಗೆ ಆದ್ಯತೆ ನೀಡುತ್ತಿರುವ ಆರೋಗ್ಯ ಇಲಾಖೆ ನಾಗರಾಜ್ ಅವರಿಗೆ ರೋಟರಿ ಸಂಸ್ಥೆ ಸನ್ಮಾನಿಸಿ ಗೌರವಿಸಿದರು. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಆರ್ಮುಗಂ, ನಾರಾಯಣಲಾಲ್, ಡಾ.ಮುರುಗೇಶ್, ಕಸ್ತೂರಿ ಜನನಿ ಸಂಸ್ಥೆಯ ಕುಮಾರಸ್ವಾಮಿ, ಸತೀಶ್ ಆರಾಧ್ಯ ಇದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರೋಟರಿ ಸಂಸ್ಥೆಯ ಶ್ರೀಕಂಠಯ್ಯ ಸ್ವಾಗತಿಸಿ, ವಂದಿಸಿದರು.