ಮಂತ್ರಾಲಯ: ಆ.11ರಿಂದ ರಾಯರ ಆರಾಧನೆ

Updated on: 

ರಾಯಚೂರು: ಕಲಿಯುಗದ ಕಾಮಧೇನು ಶ್ರೀರಾಘವೇಂದ್ರತೀರ್ಥರ 343ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಆ.9ರಿಂದ ಆ.15ರವರೆಗೆ ಸಪ್ತರಾತ್ರೋತ್ಸವ ಆಚರಣೆ ನಡೆಯಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು ತಿಳಿಸಿದರು.
ಆ.11 ರಿಂದ ಆ.13ರವರೆಗೆ ರಾಯರ ಆರಾಧನೆ ನಡೆಯಲಿದೆ. ಮಧ್ಯಾರಾಧನೆ ದಿನವಾದ ಆ.12ರಂದು ತಿರುಪತಿಯ ದೇವಸ್ಥಾನಗಳ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಭಾರತ ರತ್ನ, ಖ್ಯಾತ ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್, ಪಂ.ಹರಿದಾಸ್ ಭಟ್ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅವರಿಗೆ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು. ಪರಿಮಳ ಪ್ರಸಾದ ವಿತರಣೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ವಿವಿಧೆಡೆ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆರಾಧನೆ ಇಲ್ಲವೇ ತಮ್ಮ ಚಾತುರ್ಮಾಸ್ಯ ವೃತ ಪೂರ್ಣಗೊಳ್ಳುವ ಮೊದಲು ಶ್ರೀಮಠದಿಂದ ನಿರ್ಮಿಸಿದ 100 ಕೊಠಡಿಗಳ ವಸತಿ ಸಮುಚ್ಛಯ ಉದ್ಘಾಟನೆ ನೆರವೇರಲಿದೆ ಎಂದರು.
ರಾಯರ ಬಗ್ಗೆ ನಿರ್ಧಾರ ಭಕ್ತರಿಗೆ ಬಿಟ್ಟಿದ್ದು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳನ್ನು ಆರಾಧಿಸಿದ ಎಲ್ಲರಿಗೂ ರಾಯರು ಅನುಗ್ರಹಿಸುತ್ತಿದ್ದಾರೆ. ದೇವರು ಹೌದೋ, ಅಲ್ಲವೋ ಎಂಬುದು ಭಕ್ತರಿಗೆ ಬಿಟ್ಟ ವಿಚಾರ ಎಂದು ಮಂತ್ರಾಲಯದ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರತೀರ್ಥರು ಹೇಳಿದ್ದಾರೆ. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಘವೇಂದ್ರಸ್ವಾಮಿಗಳು ದೇವರಲ್ಲ ಎಂದು  ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಯಿಂದ ಉಂಟಾದ ವಿವಾದದ ಬಗ್ಗೆ ಚರ್ಚೆ ಅನಗತ್ಯ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com