ಮೂಡಬಿದಿರೆ: ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠವು 2013ನೇ ಸಾಲಿನ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಮೈಸೂರಿನ ಡಾ.ಡಿ.ಎ. ಶಂಕರ್ ಅವರ 'ಹೈದರಾಲಿ' ನಾಟಕ ಮತ್ತು ವರ್ಷದ ಶ್ರೇಷ್ಠ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಲಕ್ಷ್ಮೀಪತಿ ಕೋಲಾರ ಅವರ 'ಅಲ್ಲಮನ ಬಯಲಾಟ' ನಾಟಕಕ್ಕೆ ನೀಡಲು ನಿರ್ಧರಿಸಿದೆ.
ಪೀಠದ ಅಧ್ಯಕ್ಷ ಸಿ.ಕೆ. ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2013ರ ಸಾಲಿನ ತೀರ್ಪುಗಾರ ಮಂಡಳಿ ಸದಸ್ಯರಾದ ಪ್ರೊ.ಎ.ವಿ. ನಾವಡ, ಡಾ.ಬಿ. ಜನಾರ್ದನ ಭಟ್, ವಿ.ಗ. ನಾಯಕ ನೀಡಿದ ಅಂಕಗಳ ಆಧಾರದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮೂಡುಬಿದಿರೆ ಸಮಾಜ ಮಂದಿರದ ವತಿಯಿಂದ ನಡೆಯುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ.
Advertisement