ಕಟೀಲಿನಲ್ಲಿ ಸೀಯಾಳಾಭಿಷೇಕ

Updated on: 

ಮೂಲ್ಕಿ: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಂಗಳವಾರ ಅತ್ತೂರು-ಕೊಡೆತ್ತೂರು ಗ್ರಾಮಸ್ಥರಿಂದ ಲೋಕ ಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ನಡೆದು ದೇವಳದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಆಸ್ರಣ್ಣ ಬಂಧುಗಳಿಂದ ಸೀಯಾಳಾಭಿಷೇಕ ಜರಗಿತು.
ಕಟೀಲಿನ ಮಲ್ಲಿಗೆ ಅಂಗಡಿಯಿಂದ ಬೆಳಗ್ಗಿನ ಜಾವದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರು ಮೆರವಣಿಗೆ ಮೂಲಕ ಆಗಮಿಸಿ ದೇವಳಕ್ಕೆ ಸೀಯಾಳ ತಂದೊಪ್ಪಿಸಿದ ಬಳಿಕ 8 ಗಂಟೆಗೆ ದೇವಿಗೆ ಸೀಯಾಳಾಭಿಷೇಕ ಜರುಗಿತು.
ಅಭಿಷೇಕ ವಿವಾದ: ಅತ್ತೂರು-ಕೊಡೆತ್ತೂರು ಗ್ರಾಮಸ್ಥರು ಪ್ರತಿವರ್ಷ ಜೂನ್‌ನಲ್ಲಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸೀಯಾಳಾಭಿಷೇಕ ಮಾಡುತ್ತ ಬಂದಿದ್ದು ಈ ವರ್ಷ ಅರ್ಚಕರ ಮತ್ತು ಗ್ರಾಮಸ್ಥರ ನಡುವಿನ ವಿವಾದದಿಂದಾಗಿ ಸೀಯಾಳಾಭಿಷೇಕ ನಡೆಯದೆ ಬಾಕಿ ಉಳಿದಿತ್ತು.
ದೇವಳದಲ್ಲಿ ಹಿಂದೆ ಹಗಲು ಹೊತ್ತಿನಲ್ಲಿ ಅಭಿಷೇಕ ನಡೆದು ಬಳಿಕ ದೇವಿಯ ಅಲಂಕಾರದ ಸಂದರ್ಭದಲ್ಲಿ ಗರ್ಭಗುಡಿಗೆ ಬಾಗಿಲು ಹಾಕುತ್ತಿದ್ದುದರಿಂದ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಇಡಲಾದ ಅಷ್ಟ ಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಂತೆ ಬೆಳಗ್ಗೆ ಬೇಗ ಅಭಿಷೇಕ ಮಾಡುತ್ತಿದ್ದು ಅದರಿಂದ ಹಗಲಿನ ಅವಧಿಯಲ್ಲಿ ಸೀಯಾಳಾಭಿಷೇಕ ನಡೆಸಲು ಸಾಧ್ಯವಿಲ್ಲ, ಸಂಜೆ ಸೀಯಾಳ ತಂದು ಕೊಟ್ಟಲ್ಲಿ ಬೆಳಿಗ್ಗೆ ಬೇಗ ಅಭಿಷೇಕ ಮಾಡುವುದಾಗಿ ಅರ್ಚಕರ ವಾದವಾಗಿತ್ತು.
ಹಿಂದಿನಿಂದ ನಡೆದು ಬಂದ ಕ್ರಮದಂತೆ ಬೆಳಿಗ್ಗೆ ಸೀಯಾಳಾಭಿಷೇಕ ಮಾಡುವಂತೆ ಗ್ರಾಮಸ್ಥರ ಒತ್ತಾಯವಾಗಿದ್ದು ಈ ಬಗ್ಗೆ ಅರ್ಚಕರ ಮತ್ತು ಗ್ರಾಮಸ್ಥರ ನಡುವೆ ವಾದ ವಿವಾದ ನಡೆದು ಜಿಲ್ಲಾಧಿಕಾರಿ, ಸಂಸದ, ಸಚಿವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸುವವರೆಗೆ ಮುಂದುವರಿದಿತ್ತು.
ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಸಹಮತಕ್ಕೆ ಬಂದು ಸಮಸ್ಯೆ ಬಗೆಹರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com