ನಿತ್ಯೋಪಯೋಗಿ ವಸ್ತು ವಿತರಣೆ

Updated on: 

ಕನ್ನಡಪ್ರಭ ವಾರ್ತೆ, ಶಿರಸಿ, ಜೂ. 30
ಕರ್ಜಗಿಯ ಮನು ವಿಕಾಸ ಸಂಸ್ಥೆ ಮತ್ತು ಗೀವ್ ಇಂಡಿಯಾ ಸಂಸ್ಥೆ ಆಶ್ರಯದಲ್ಲಿ ಶಿರಸಿ ತಾಲೂಕಿನ ಇಸಳೂರ ಪ್ರೌಢಶಾಲೆ, ಬರೂರ  ಹಿರಿಯ ಪ್ರಾಥಮಿಕ ಶಾಲೆ, ಯಡಳ್ಳಿಯ ವಿದ್ಯೋದಯ ಪ್ರೌಢ ಶಾಲೆ, ಸಿದ್ದಾಪುರ ತಾಲೂಕಿನ ದೊಡ್ಮನೆಯ ಎಂ.ಜಿ.ವಿ.ವಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ತಂದೆ-ತಾಯಿ ಇಲ್ಲದ ಮತ್ತು ಬಡ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.
20 ವಿದ್ಯಾರ್ಥಿಗಳಿಗೆ ತಲಾ ರು. 2,900 ಮೌಲ್ಯದ ಬೆಡ್‌ಶೀಟ್, ಚಾದರ್, ಸ್ಕೂಲ್ ಬ್ಯಾಗ್, ಬಟ್ಟೆ, ಸೋಪ್, ಬ್ರಷ್, ಟಾವೆಲ್, ನೋಟ್‌ಬುಕ್, ಶಬ್ದಕೋಶ ಮತ್ತು ವ್ಯಾಕರಣ ಪುಸ್ತಕ, ಷೂ, ರೇನ್‌ಕೋಟ್, ಕೊಬ್ಬರಿ ಎಣ್ಣೆ, ಜಾಮೆಟ್ರಿ ಬಾಕ್ಸ್ ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು. ಇಸಳೂರ ಪ್ರೌಢಶಾಲೆಯಲ್ಲಿ ಮನುವಿಕಾಸ ಸಂಸ್ಥೆಯ ಅಧ್ಯಕ್ಷ ಹರಿಶ್ಚಂದ್ರ ಭಟ್ಟ, ನಿರ್ದೇಶಕ ಗಣಪತಿ ಭಟ್ಟ ವಿತರಿಸಿದರು.
ನಂತರ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ, ಸಂಸ್ಥೆಯಿಂದ ಈಗಾಗಲೇ 650 ಮಕ್ಕಳಿಗೆ ನೆರವು ನೀಡಿದ್ದು, ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕಿನ ಇನ್ನೂ 1500 ಮಕ್ಕಳಿಗೆ ಕಿಟ್ ವಿತರಣೆ ಗುರಿ ಹೊಂದಲಾಗಿದೆ ಎಂದರು.
ಯಡಳ್ಳಿ ವಿದ್ಯೋದಯ ಪ್ರೌಢಶಾಲೆಯಲ್ಲಿ ವಿದ್ಯೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಹೆಗಡೆ ಮುಂಡಗೇಸರ, ಮುಖೋಪಾಧ್ಯಾಯರಾದ ಎಂ.ಜಿ. ಭಟ್ಟ, ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಬಿ.ಬಿ. ಕುಂದರ್ಗಿ ವಿತರಿಸಿದರು. ದೊಡ್ಮನೆಯ ಎಂ.ಜಿ.ವಿ.ವಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದ ವಿರೂಪಾಕ್ಷಪ್ಪ, ಮನುವಿಕಾಸ ಸಂಸ್ಥೆಯ ಸಂಯೋಜಕರಾದ ಈರಯ್ಯಾ ಬೆಂಡಿಗೇರಿ ಮತ್ತು ಶಂಬು ಕೆ. ಸಾಮಗ್ರಿ ವಿತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com