ಪೊಲಿಯೋ ಹಾಕಿಸುವುದಕ್ಕೆ ಸೇವಾಕರ್ತರ ತಂಡ ಸಂತಾ ಮನೆ ಬಾಗಿಲಿಗೆ ಬಂತು.
'ಬಂದೂಕು ಮತ್ತು ಕಾಡತೂಸು ಎಲ್ಲಿದಾವ್ರೀ' ಅಂತ ಸಂತಾ ಹೆಂಡತಿ ಕೂಗಿಕೊಂಡಳು. ಪೊಲಿಯೋ ತಂಡ ಹೆದರಿ ಓಡುವುದಕ್ಕೆ ಶುರು ಮಾಡಿದಾಗ ಸಂತಾ ಕೂಗಿಕೊಂಡ- 'ನಿಲ್ಲಿ, ನಿಲ್ಲಿ...ಅವು ನಮ್ಮ ಮಕ್ಕಳ ಹೆಸರುಗಳು...'
---------------
ಬಟ್ಟೆ ಒಗೆಯುತ್ತಿದ್ದ ಕೋಲ್ಯನ ಹೆಂಡತಿ ಒಮ್ಮೇಲೆ ಕುಪಿತಳಾಗಿ ಆತನನ್ನು ಕೇಳಿದಳು- 'ನಿಮ್ಮ ಟೀ ಶರ್ಟ್ ಮೇಲೆ ಈ ಲಿಪ್ಸ್ಟಿಕ್ ಕಲೆ ಹೇಗೆ ಆಯ್ತು?'
ಕೋಲ್ಯ: ನನಗೂ ಅದೇ ಗೊತ್ತಾಗ್ತಾ ಇಲ್ಲ...ಆಗ ನಾನು ಶರ್ಟ್ ಹಾಕಿಕೊಂಡಿರಲಿಲ್ಲ!