ಕ್ರೆಡಿಟ್ ಕಾರ್ಡ್‌ನಲ್ಲಿ ಕ್ರೆಡಿಟ್ಟು, ಡೆಬಿಟ್ ಕಾರ್ಡ್‌ನಲ್ಲಿ ಡೆಬಿಟ್ಟು. ಆದರೆ ಮಾರ್ಕ್ಸ್‌ಕಾರ್ಡ್‌ನಲ್ಲಿ ಮಾರ್ಕ್ಸ್ ಯಾಕೆ ಇರಲ್ಲ?

Updated on: 

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಕ್ರೆಡಿಟ್ ಕಾರ್ಡ್‌ನಲ್ಲಿ ಕ್ರೆಡಿಟ್ಟು, ಡೆಬಿಟ್ ಕಾರ್ಡ್‌ನಲ್ಲಿ ಡೆಬಿಟ್ಟು. ಆದರೆ ಮಾರ್ಕ್ಸ್‌ಕಾರ್ಡ್‌ನಲ್ಲಿ ಮಾರ್ಕ್ಸ್ ಯಾಕೆ ಇರಲ್ಲ?
ಪಾನ್‌ಕಾರ್ಡ್ ಜತೆ ಪಾನ್ ಕೂಡ ಕೊಡಲ್ವಲ್ಲ ಭಟ್ರೇ!

ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 8861404122
ಹಣ ತುಂಬಿದ ತಿಜೋರಿಗೆ 'ಕನ್ನ' ಹಾಕುವವರಿಗೂ, 'ಪ್ರೀತಿ' ತುಂಬಿದ ಹೃದಯಕ್ಕೆ ಕನ್ನ ಹಾಕುವವರಿಗೂ ಏನು ವ್ಯತ್ಯಾಸ?
ತಿಜೋರಿಗೆ ಕನ್ನ ಹಾಕಿದಾಗ ಸಿಗುವುದು ಚಿನ್ನ. ಹೃದಯಕ್ಕೆ ಕನ್ನ ಹಾಕಿದರೆ ಕಿಸೆಗೇ ಬೀಳುವುದು ಕನ್ನ.

ಲಕ್ಷ್ಮೀ ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ
ಇತ್ತೀಚೆಗೆ ದೇಶದೆಲ್ಲೆಡೆ ಅತ್ಯಾಚಾರದಂತಹ ಪ್ರಕರಣಗಳೇ ಹೆಚ್ಚಾಗುತ್ತಿವೆಯಲ್ಲ?
ಅತ್ಯಾಚಾರದಂತಹ ಅಂದರೇನು ಎಂಬುದು ಮೊದಲು ಬಗೆಹರಿಯಬೇಕು.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹೆಂಗಸರು ಹಾಡುವಾಗ ಸೇರುವಷ್ಟು ಜನ ಗಂಡಸರ ಹಾಡುಗಾರಿಕೆ ಇದ್ದಾಗ ಸೇರುವುದಿಲ್ಲವೇಕೆ?
ರಸ್ತೆಯಲ್ಲಿ ಹುಡುಗಿ ಬಿದ್ದಾಗ ಎಬ್ಬಿಸಲು ಹೋದಷ್ಟು ಹುಡುಗರು ಬಿದ್ದಾಗ ಹೋಗುವುದಿಲ್ಲವಲ್ಲ ಅದಿಕ್ಕೆ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
'ಕುಡಿಯೋದು' ಅಂದ್ರೆ ಎಲ್ರೂ 'ಹೆಂಡ' ಅಂತಾನೇ ಯಾಕೆ ತಿಳ್ಕೋತಾರೆ?
ಬರ್ತೀಯಾ ಅಂತ ಕರೆದ್ರೆ ಅದ್ಕೆ ಅಂತ ಅಂದ್ಕೊಳೊಲ್ವೇ ಹಾಗೆ.

- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com