ಆಸ್ಪತ್ರೆಯಲ್ಲಿ ಗಂಡ- ಹೆಂಡತಿ..
ವೈದ್ಯ: ಅರೆ, ಆಶ್ಚರ್ಯ! ನಿಮ್ಮಿಬ್ಬರ ಬ್ಲಡ್ಗ್ರೂಪ್ ಒಂದೇ ಇದೆ.
ಗಂಡ: ಆಶ್ಚರ್ಯ ಏನ್ ಬಂತು? ಹತ್ತು ವರ್ಷಗಳಿಂದ ಈಕೆ ನನ್ನ ರಕ್ತ ಹೀರ್ತಿದ್ದಾಳೆ!
----
ಗರ್ಲ್ಸ್ ಹಾಸ್ಟೆಲ್ನಲ್ಲಿ ಬೆಂಕಿ ಹೊತ್ತಿಕೊಂಡಿತು. ಪಕ್ಕದ ಬಾಯ್ಸ್ ಹಾಸ್ಟೆಲ್ನ ಹುಡುಗರು ಹುಡುಗಿಯರಿಗೆ ಸಹಾಯ ಮಾಡಲು ಮುಗಿಬಿದ್ದರು.
ಟಿ.ವಿ.ಯಲ್ಲಿ ನ್ಯೂಸ್ ಬಂದಿತು: ಗರ್ಲ್ಸ್ ಹಾಸ್ಟೆಲ್ಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಗಿದೆ, ಆದರೆ ಹುಡುಗರನ್ನು ಹತೋಟಿಗೆ ತರುವುದು ಮಾತ್ರ ಕಷ್ಟವಾಗುತ್ತಿದೆ!