ಜೆ.ಪಿ. ನಾಗರಾಜ, ದಾವಣಗೆರೆ, 9901193811
ಪ್ರೀತಿಯ ಕೊನೆಯ ಭಾಗ ಪಶ್ಚಾತ್ತಾಪವೋ? ಆತ್ಮಹತ್ಯೆಯೋ?
ಮದುವೆಯೂ ಆಗಬಹುದು!
ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ನಿತ್ಯ ಭವಿಷ್ಯದಲ್ಲಿ ವಿವಾಹಯೋಗ ಎಂದು ವಾರ ಭವಿಷ್ಯದಲ್ಲಿ ಅಪಘಾತ ಸಂಭವ ಎಂದಿದೆಯಲ್ಲ?
ನಿತ್ಯ ಭವಿಷ್ಯ ಬರೆಯುವವರು 'ಅಪಘಾತ' ಎಂಬುದನ್ನೇ ಸುಂದರ ಶಬ್ದಗಳ ಮೂಲಕ ಹೇಳಿದ್ದಾರೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ದಿನದ 24 ಗಂಟೆಯೂ ಹಗಲೇ ಇರುವಂತಿದ್ದರೆ ಹೇಗಿರುತ್ತಿತ್ತು?
ಎಲ್ಲರೂ ಹಗಲುಗನಸು ಕಾಣುವವರೇ ಆಗಿರುತ್ತಿದ್ದರು!
ಜೆ.ಪಿ. ನಾಗರಾಜ, ದಾವಣಗೆರೆ, 9901193811
ಅವಳು ಕೊಟ್ಟ ಮುತ್ತು ಕೊನೆತನಕ ನೆನಪಿರಲು ಏನು ಮಾಡಬೇಕು?
ಮತ್ತೆ ಮುತ್ತು ಪಡೆಯಬಾರದು!
ಜಗದೀಶ ಎಂ.ಎಸ್. ಬೆಳಗಾವಿ, 8722444410
ತುಂಬಿದ ಕೊಡ ತುಳುಕುವುದಿಲ್ಲ. ತುಂಬಿದ ಪ್ರೀತಿ?
ಬಳುಕುವುದಿಲ್ಲ!
ಬಾಣಭಟ್ಟ