ಮರಿಕೋಲ್ಯ: ಅಪ್ಪ, ನಿನಗೆ ದೆವ್ವಗಳಲ್ಲಿ ನಂಬಿಕೆ ಇದೆಯಾ?
ಕೋಲ್ಯ: ದೆವ್ವ ಅನ್ನೋದೇ ಸುಳ್ಳು...
ಮರಿಕೋಲ್ಯ: ಆದ್ರೆ ನಮ್ಮ ಮನೆಕೆಲಸದಾಕೆ ರಾತ್ರಿ ಹೇಳಿದ್ಲು...ದೆವ್ವಗಳು ನಿಜಕ್ಕೂ ಇರುತ್ವೆ ಅಂತ?
ಕೋಲ್ಯ: ಬೇಗ ಬಟ್ಟೇನೆಲ್ಲ ಪ್ಯಾಕ್ ಮಾಡ್ಕೋ. ಈಗ್ಲೇ ನಾವು ಮನೆ ಖಾಲಿ ಮಾಡೋಣ!
ಮರಿ ಕೋಲ್ಯ: ಯಾಕೆ?
ಕೋಲ್ಯ: ನಮಗೆ ಮನೆಕೆಲಸದಾಕೇನೇ ಇಲ್ವಲ್ಲೋ!!!
----
ಸಂದರ್ಶಕ- ಭೂಮಿ 30 ಪಟ್ಟು ಹೆಚ್ಚಿನ ವೇಗದಲ್ಲಿ ತಿರುಗಿದರೆ ಏನಾಗುತ್ತದೆ?
ಅಭ್ಯರ್ಥಿ- ನಮಗೆ ಪ್ರತಿದಿನವೂ ಸಂಬಳ ಸಿಗುತ್ತದೆ!