ಮನು ವಿ, ದಾವಣಗೆರೆ, 9739259427
ಹೆಣ್ಣು ಅಪ್ಸರೆ ಅಂತಾರೆ, ಹಾಗಾದರೆ ಗಂಡು?
ಅಪ್ಸರೆಯಾಗಿದ್ದಕ್ಕೆ ಸಾರ್ಥಕ ಎನ್ನಿಸುವ ಭಾವ ಮೂಡಿಸುವವ!
ಹರಳಹಳ್ಳಿ ಪುಟ್ಟರಾಜು, 9632838088
ರಾಜ್ಯ ರಾಜಕೀಯದಲ್ಲಿ ಸದ್ಯದ ಜೋಕರ್ ಯಾರು?
ಮತದಾರನೇ ದುರಂತ ನಾಯಕ ಅನ್ನೋದನ್ನ ಮಾತ್ರ ನಿಖರವಾಗಿ ಹೇಳಬಹುದು!
ನೇರಲಗುಡ್ಡ ಶಿವಕುಮಾರ್, 9480343742
ಸುಂದರ ಹೆಂಡತಿಯಿಂದ ಸಮಸ್ಯೆಗಳು ಸಾವಿರವಂತೆ, ನಿಜವೇ?
ಈ ಪ್ರಶ್ನೆಯಲ್ಲಿ ಸುಂದರ ಎಂಬ ಶಬ್ದದ ಅಗತ್ಯವೇನಿಲ್ಲ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೇಯಸಿ ಆಗಿದ್ದಾಗ ಪ್ರೀತಿಯಿಂದ 'ಹೇಳು' ಅನ್ನುತ್ತಿದ್ದವರು, ಮಡದಿಯಾದ ಬಳಿಕ 'ಬೊಗಳು' ಎನ್ನುತ್ತಾರಲ್ಲ?
ಕೊನೆಗೂ ತಮಗೆ ಬೇಕಿದ್ದದ್ದು ಏನಾಗಿತ್ತು ಎಂಬುದರ ಪ್ರಾಮಾಣಿಕ ಅಭಿವ್ಯಕ್ತಿ!
ವಿಷ್ಣುಶಂಕರ, ಶಿವಮೊಗ್ಗ
ಪ್ರೇಮಿಗಳು ದೂರವಿದ್ದರೇನೆ ಹೆಚ್ಚು ಪ್ರೀತಿಸುತ್ತಾರಂತೆ ನಿಜವೇ?
ನಿಜ. ಆದರೆ ಯಾರನ್ನು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ!
ಬಾಣಭಟ್ಟ