ಯಶಸ್ವೀ ಕಂಪನಿಯೊಂದರ ಮುಖ್ಯಸ್ಥನೊಬ್ಬನನ್ನು ಪತ್ರಕರ್ತನೊಬ್ಬ ಕೇಳಿದ-'ಸರ್ ನಿಮ್ಮ ಕಂಪನೀಲಿ ಬರೀ ವಿವಾಹಿತರಿಗೇ ಏಕೆ ಕೆಲಸ ಕೊಡುತ್ತೀರಿ?'
ಮುಖ್ಯಸ್ಥ: ಯಾಕಂದ್ರೆ ಅವ್ರಿಗೆ ಅಪಮಾನ ಸಹಿಸೋ ಅಭ್ಯಾಸವಾಗಿರುತ್ತೆ ಮತ್ತು ಮನೆಗೆ ಹೋಗುವ ಅವಸರಾನೂ ಇರೋಲ್ಲ!
----
ವೈದ್ಯ- ನಿಮ್ಮ ಗಂಡನಿಗೆ ನಿದ್ರೆ ಮತ್ತು ಶಾಂತಿಯ ಅಗತ್ಯವಿದೆ. ಹೀಗಾಗಿ ನಿದ್ರೆಮಾತ್ರೆ ಬರೆದುಕೊಡುತ್ತೇನೆ.
ಈಕೆ- ಯಾವಾಗ ಅದನ್ನವರಿಗೆ ಕೊಡಬೇಕು ಡಾಕ್ಟ್ರೇ?
ವೈದ್ಯ- ನಿದ್ರೆಮಾತ್ರೆ ಅವರಿಗಲ್ಲ, ನಿಮಗೆ!