ಓಂ.ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 8861404122
ತಾಯಿ ಹಾಡುವ ಲಾಲಿ ಹಾಡಿಗೂ, ಪ್ರೇಯಸಿ ಹಾಡುವ ಜಾಲಿ ಹಾಡಿಗೂ ವ್ಯತ್ಯಾಸವೇನು?
ತಾಯಿಯ ಹಾಡು ನಿದ್ದೆ ಬರಿಸಿದರೆ, ಪ್ರೇಯಸಿಯ ಹಾಡು ನಿದ್ದೆಗೆಡಿಸುತ್ತದೆ!
ಬಸವನಗೌಡ ಹೆಬ್ಬಳಗೆರೆ, ಚೆನ್ನಗಿರಿ
ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನೀವು 'ಲೈಫ್ಲೈನ್' ಏನಾದ್ರೂ ಬಳಸ್ತೀರಾ ಭಟ್ರೇ?
ಅಂಥ ಭಾವ ಬರಗಾಲ ಇನ್ನೂ ಬಂದಿಲ್ಲಪ್ಪ!
ಕೆ.ಎಂ.ಲಿಂಗರಾಜು, ನಂಜನಗೂಡು, 9916021365
ಚುನಾಯಿಸುವುದಕ್ಕೂ, ಚುಡಾಯಿಸುವುದಕ್ಕೂ ಇರುವ ವ್ಯತ್ಯಾಸವೇನು?
ಚುಡಾಯಿಸಿದರೆ ಒಮ್ಮೆ ಮಾತ್ರ ಕಪಾಳಮೋಕ್ಷ, ಚುನಾಯಿಸಿದರೆ ಜೀವನಪರ್ಯಂತ!
ವೀರೇಶ್, ಹೆಚ್.ಎನ್ ಹೆಬ್ಬಳಗೆರೆ, 9035211021
'ದಪ್ಪ ಇದ್ರೆ ಹೊರೋರು ಬಯ್ತಾರೆ, ಉದ್ದ ಆದ್ರೆ ಊಳೋರು ಬಯ್ತಾರೆ' ಮತ್ತೆ ಸತ್ತ ಮೇಲೆ ಸುಲಭ ಆಗೋಕೆ ಹೇಗಿರಬೇಕು?
ಒಟ್ಟಿನಲ್ಲಿ ಸೈಜು ಕೇಳಿ ಸಾಯುವಂತಹ ಪರಿಸ್ಥಿತಿ ಬಂತೂ ಅನ್ನು!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಕಮಲಕ್ಕೂ, ಹಸ್ತಕ್ಕೂ ಇರುವ ವ್ಯತ್ಯಾಸವೇನು ಭಟ್ರೇ?
ಹೆಚ್ಚು ವ್ಯತ್ಯಾಸವಿಲ್ಲ. ರಾಜಕಾರಣಿಗಳು 'ಕಮಲ'ವನ್ನು ಮತದಾರರ ಕಿವಿಯ ಮೆಲಿಡಲು, 'ಹಸ್ತ'ವನ್ನು ಕೈಕೊಡಲು ಬಳಸಿಕೊಳ್ಳುತ್ತಾರಷ್ಟೇ!
- ಬಾಣಭಟ್ಟ