ವಿವಾದ

Updated on: 

ಮಾಧ್ಯಮಗಳ ಸುಗ್ರಾಸ ಭೋಜನ
    ದಿಕ್ಕು ದಿಕ್ಕಿಗೆ ಪ್ರಚಾರ ಸಿಗಲೆಂದು ದಿಗ್ವಿಜಯರಂಥ ದಿಕ್ಕೆಟ್ಟವರು ಹುಟ್ಟು ಹಾಕುವ ಅನವಶ್ಯಕ ಕೋಲಾಹಲ
    ಅದೆಷ್ಟೋ ವಕೀಲರ ಹೊಟ್ಟೆ ಹೊರೆಯುತ್ತಿರೋದು ಈ ವಿವಾದಗಳೇ
    ಗಳಗಳನೇ ಅಳುವಂತೆ ಮಾಡುವ ಜಗಳ
    ಕೆಲವು ವಿವಾದಗಳಿಗೆ ಹುಟ್ಟು ಇರುತ್ತದೆ, ಆದರೆ ಸಾವಿರಲ್ಲ. ಅದು ಅನಂತರ. ಉದಾ-ಕಾವೇರಿ ವಿವಾದ
    ಜ್ಞಾನಕ್ಕಾಗಿ ಮಾಡುವ ವಾದ ಇದಲ್ಲ, ಅಜ್ಞಾನಿಗಳು ಮಾಡುವಂಥದ್ದು
    ಮತ್ತೊಬ್ಬನ ಸೋಲೇ ಮುಖ್ಯವಾದರೆ ವಾದವು ವಿವಾದವಾಗಿ ಪರಿವರ್ತನೆಯಾಗುತ್ತದೆ.
    ಗಂಟು ಬಿಡಿಸಲು ಹೋಗಿ ಕಗ್ಗಂಟಾಗಿಬಿಡುವಂಥದ್ದು
    ವಿಲಕ್ಷಣ ವಾದವೇ ವಿವಾದ
    ಸಿನಿಮಾ ಪ್ರಚಾರಕ್ಕಿರುವ ಅಗ್ಗದ ಸಾಧನ
    ಯಾರೋ ಆಗಿರುವವರು 'ಓಹ್ ಅವರಾ' ಅಂತಾಗಲು ಮುಖ್ಯ ಕಾರಣ
    ರಾಜಕಾರಣಿಗಳು ತುಟಿಯೊಡೆದರೆ ಇದೇ ಆಗೋದು
    ಕೆಲವರು ಬಾಯಿ ಬಿಡೋದೇ ಇದಕ್ಕೋಸ್ಕರ
    ಅನುವಾದ ಮಾಡುವಾಗ ಆಗುವ ಯಡವಟ್ಟು ಇದನ್ನೇ ಹುಟ್ಟು ಹಾಕುತ್ತದೆ
    ಮಹಾತ್ಮರನ್ನೋ, ಜಾತಿಯನ್ನೋ ನಿಂದಿಸಿದರೆ ಸಾಕು
    ವಿವಾದಗಳೆಲ್ಲ ಅನಗತ್ಯವೇ. ಅಗತ್ಯ ವಿವಾದಗಳೆಂಬುದಿಲ್ಲ
    ಕೆಲವರಿಗೆ ವಿವಾದದಲ್ಲಿ ಸಿಲುಕುವುದು ಮತ್ತು ಸೃಷ್ಟಿಸುವುದೇ ಉದ್ಯೋಗ ಮತ್ತು ಜೀವನೋಪಾಯ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com