ಅಕ್ಕಿ

Updated on: 

ಬಿಪಿಎಲ್ ಕಾರ್ಡ್ ಇದ್ದವನೇ ಲಕ್ಕಿ
    ಕೂತು ಉಂಡರೂ ಖರ್ಚಾಗದು ಇನ್ನು ಮುಂದೆ
    ಎಲ್ಲ ಪಕ್ಷಗಳ ಪ್ರಣಾಳಿಕೆಯ ಪ್ರಮುಖ ಜೀವಸತ್ವ
    ಅನ್ನದ ಪೂರ್ವಾಶ್ರಮದ ಹೆಸರು
    ಕಾಲದ ಪರಿವೆಯಿಲ್ಲದೇ ಹೊಲದಲ್ಲಿ ದುಡಿಯುವ ರೈತನ ಬೆವರ ಹನಿಗಳ ಮೂರ್ತ ರೂಪ
    ವಿವಾಹೋತ್ಸವದಲ್ಲಿ ವಧು ವರರ ತಲೆಯ ಮೇಲೆ ಹಾಕುವ ಆಶೀರ್ವಾದ ಸೂಚಕ
    ಕಲ್ಲು ಮತ್ತು ಮರಳಿನ ಜೊತೆಯಲ್ಲಿ ಪೇಟೆಯಲ್ಲಿ ಸಿಗುವಂಥದ್ದು
    ಹಸಿಹಸಿ ಹೊಟ್ಟೆಯ ಹಸಿವು ತಣಿಸುವ ಮೂಲಧಾತು
    ರೇಟಿನ ಮೂಲಕವೇ ಏಟು ಕೊಡುತ್ತಿರುವ ಧಾನ್ಯ
    ಭತ್ತದಿಂದ ಪಡೆಯಬಲ್ಲ ಬುತ್ತಿ
    ಅಕ್ಕರೆಯಿಂದ ಬೆಳೆದ ರೈತನಿಗೆ ಅಕ್ಕಿಗೂ ಗತಿಯಿಲ್ಲ
    ಎಲ್ಲರ ಹೊಟ್ಟೆಪಾಡು
    ಮೈಯ್ಯಲ್ಲಿ ಸೊಕ್ಕಿರುವವಗೆ ಅಕ್ಕಿ ಕೊಡಬಾರದು
    ಅಕ್ಕಿ ಮೇಲೆ ಆಸೆ ಇರುವವರೆಲ್ಲ ಬಡವರಾಗಬೇಕು. 1 ರುಪಾಯಿಗೆ ಪಡೆದು ಹಾಯಾಗಿ ನಿದ್ರಿಸಬಹುದು

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com