ಹೊಟ್ಟೆಗೇನು ತಿಂತೀರಿ ಎಂಬ ಪ್ರಶ್ನೆಗೆ ಉತ್ತರ
ರೊಕ್ಕವುಳ್ಳವನಿಗೆ ಸಿಗುವುದು ಪಕ್ಕಾ
ಪಂಡಿತರೂ ಪಡಿತರ ಮೂಲಕ ಪಡೆವ ಆಹಾರ ಸಾಮಗ್ರಿ
ಬಿಟ್ಟಿ ಸಿಗುವುದಾದರೆ ಯಾರು ಬಿಟ್ಟಾರು ಹೇಳಿ?
ಮುಷ್ಟಿ ಆಹಾರಕ್ಕಾಗಿಯೇ ಅಲ್ಲವೇ ಮುಷ್ಟಿ ಯುದ್ಧಗಳೂ ನಡೆದದ್ದು
ಉಚಿತವಾಗಿ ಅಕ್ಕಿ ಕೊಟ್ಟರಾಯಿತೇ ಅನ್ನ ಮಾಡಿ ಹಾಕುವವರು ಬೇಡವೇ ಅವರನ್ನೂ ಸರ್ಕಾರ ಒದಗಿಸಬೇಕಲ್ಲವೇ?
ನುಚ್ಚು ಹೆಚ್ಚಿರುವುದೇ ಹೆಚ್ಚು
ಹೊಸ ಅಕ್ಕಿ ಪಾಯಸ ಬಲ್ಲವನೇ ಬಲ್ಲ ಅದರ ರುಚಿಯ..
ಧಾನ್ಯ ಲಕ್ಷ್ಮಿಯ ಅವತಾರ
ಧಾನ್ಯ ಕಣಜ ಕಂಡಲ್ಲಿ ಹಕ್ಕಿಗಳು ಬಂದು ತಿಂದು ಹೋಗೋದು ಇದನ್ನೇ
ಅಕ್ರಮವಾಗಿಯಾದರೂ ಅಕ್ಕಿ ಪಡೆದವನೇ ಸುಖಿ.
ಸೇರಿಗೆ ಸವ್ವಾ ಸೇರು ಎಂಬ ಮಾತು ಈ ವಿಷಯದಲ್ಲಿ ಹೊಂದುತ್ತದೆ
ವಿಶ್ವನಾಥ ಸುಂಕಸಾಳ