ಪುತ್ರ

Updated on: 

ಮಘಾ ನಕ್ಷತ್ರದಲ್ಲಿ ಹುಟ್ಟಿದ ಮಗ
    ಪುತ್ ಎಂಬ ನರಕದಿಂದ ಕಾಪಾಡುವವ
    ದುಡ್ಡಿಗಾಗಿ ಆಗಾಗ ತೀರ್ಥರೂಪ ತಂದೆಗೆ ಪತ್ರ ಬರೆವವ
    ಅಪ್ಪ ಪದದ ಸಮಾನಾರ್ಥಕ ಶಬ್ದ ಕೇಳಿದರೆ 'ಬೆಪ್ಪ' ಎಂಬ ಉತ್ತರ ಕೊಡುವವ
    ತನ್ನ ಪ್ರೇಮದ ವಿಚಾರವನ್ನು ತಂದೆಗೆ ತಿಳಿಸಲು ತಾಯಿಯನ್ನು ಬಳಸಿಕೊಳ್ಳುವವ
    ಪಾಲಕರು ಹೊಟ್ಟೆ ಬಟ್ಟೆ ಕಟ್ಟಿಕೊಂಡು ಕಷ್ಟಪಟ್ಟು ಹಣ ಸಂಗ್ರಹಿಸುವುದು ಈತ ಸುಖವಾಗಿರಲೆಂದೇ
    ಪಾಕೆಟ್ ಮನಿಗಾಗಿಯೇ ಹುಟ್ಟಿದ ಮಾಣಿ
    ಸೂರ್ಯೋದಯವಾದರೂ ಏಳದ ಸನ್
    ಪಾಲಕರಿಗೆ ಇವನೇ ಜೀವ. ಇವನಿಗೆ ಮಾತ್ರ ಪಾಲಕರ ಜೀವ ಲೆಕ್ಕಕ್ಕಿಲ್ಲ
    ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುವವ
    ಪಿತೃವಿನ ಕಿಸೆ ಖಾಲಿ ಮಾಡಲೆಂದೇ ಇರುವವ
    ಕುಲೋದ್ಧಾರಕನೆಂಬ ಮೂಢ ನಂಬಿಕೆ ಇವನ ಬಗೆಗಿದೆ
    ಇವನನ್ನು ಪಡೆಯಲೆಂದೇ ಅದೆಷ್ಟೋ ಹೆಣ್ಣು ಭ್ರೂಣಗಳು ಹುಟ್ಟದೇ ಸಾಯುತ್ತಿವೆ
    ಆದಷ್ಟು ಬೇಗ ಪಾಲಕರ ಕೈಗೆ ಮೊಮ್ಮಕ್ಕಳನ್ನು ಕೊಡುವ ಜವಾಬ್ದಾರಿ ಮತ್ತು ನಿರೀಕ್ಷೆ ಹೊತ್ತುಕೊಂಡವನು

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com