ಸ್ವರ್ಗ
ಆಸ್ತಿಕರು ಸತ್ತ ನಂತರ ಮತ್ತು ನಾಸ್ತಿಕರು ಇಲ್ಲಿರುವಾಗಲೇ ಅನುಭವಿಸುವಂಥದ್ದು
ಅವಿವಾಹಿತನ ಮನೆ
ಅಮ್ಮನ ಮಡಿಲು
ಬಾಸ್ ರಜೆ ಹಾಕಿದ ದಿನದ ಆಫೀಸ್
ಹೆಂಡತಿ ತವರಿಗೆ ಹೋದಾಗಿನ ವಿವಾಹಿತನ ಮನೆ
ಸ್ವಗ್ರಾಮವೇ ಸ್ವರ್ಗ
ಅಪ್ಸರೆಯರ ಪಬ್
ದೇವತೆಗಳಿಗಿದು ಸ್ವರ್ಗವಾದರೂ ಅಸುರರಿಗಿದು ನರಕವೇ
ಹೆಂಡತಿ ಮಕ್ಕಳ ಕಾಟವಿಲ್ಲದ ಜಾಗವೆಲ್ಲ ಸ್ವರ್ಗವೇ
ಇಲ್ಲಿ ಹೋಗುವುದಕ್ಕೆ ಮೊದಲು ನೀವು ಸಾಯಲೇಬೇಕಾಗುತ್ತದೆ
ಸಜೀವವಾಗಿ ಸ್ವರ್ಗ ಸೇರುವಂತಿದ್ದರೆ ಎಲ್ಲರೂ ಕಿಸೆಯನ್ನು ತುಂಬಿಸಿಕೊಂಡೇ ಹೋಗುತ್ತಿದ್ದರು
ಸ್ವರ್ಗದಲ್ಲಿ ಮಾತ್ರ ಸುಖವಿದೆಯೆಂದು ಭಾವಿಸುವವನಿಗೆ ಎಲ್ಲೆಲ್ಲೂ ದುಃಖವೇ
ಬದುಕಿರುವಾಗ ಸಿಗದ ಸ್ವರ್ಗ ಸತ್ತ ಮೇಲೆ ಸಿಕ್ಕರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿಯೇ
ಎಲ್ಲೆಲ್ಲೂ ಸುಖವನ್ನು ಅನುಭವಿಸುವ ಮನಸ್ಸುಳ್ಳವನಿಗೆ ಸ್ವರ್ಗವೇ ಬಗಲಲ್ಲಿ
ಇಲ್ಲಿಯೇ ಪಡೆಯದವ ಎಲ್ಲೂ ಪಡೆಯಲಾರ
-ವಿಶ್ವನಾಥ ಸುಂಕಸಾಳ
vishwasunkasal@yahoo.com