ಇಬ್ಬರ ಮಧ್ಯದ ಸಂಗತಿ ನಾಲ್ಕು ಜನರ ಮಧ್ಯೆ ತೆರೆದುಕೊಂಡಾಗ
ಅಂತರ್ ಅಂಗಗಳ ವಿಷಯ ಬಹಿರಂಗವಾದಾಗ
ಲೀಲಾಜಾಲವಾಗಿ ಬಾಲೆ ತೋರಿದ ಬಾಲ ಲೀಲೆ
ಈ ಶಬ್ದ ಹಿಂದಿನ ಕಾಲದಲ್ಲಿ ಬಳಕೆಯಲ್ಲಿತ್ತು
ಈಗ ಈ ಶಬ್ದ ಫ್ಯಾಷನ್ ಎಂಬ ನಾಮಾಂತರವನ್ನು ಪಡೆದು ಬಳಕೆಯಲ್ಲಿದೆ
ಸೆನ್ಸಾರ್ನವರ ಕತ್ತರಿಗೆ ಆಹಾರ
ಎದೆಗಾರಿಕೆಯ ಪ್ರದರ್ಶನ ಮಿತಿ ಮೀರಿದಾಗ
ಸಭೆಯಲ್ಲಿ ಮುತ್ತು ಕೊಟ್ಟರೆ ಅದು ಅಶ್ಲೀಲ. ಕೋಣೆಯಲ್ಲಿ ಕೊಟ್ಟರೆ ಅದು ಸರಸ
ಶೀಲ ಕಳೆದುಕೊಳ್ಳುವ ಪ್ರ-ಕ್ರಿಯೆ
ಅಂತಃಪುರದ ಹಸಿಬಿಸಿ ಕತೆಯನ್ನು ಬಿಸಿಬಿಸಿಯಾಗಿಯೇ ಬಡಿಸಿದರೆ
ಒಳವಸ್ತ್ರ ಕಾಣುವಂಥ ಹೊರವಸ್ತ್ರ ತೊಟ್ಟು ನಡೆದರೆ
ಯಾವುದು ಎಲ್ಲಿ ಎಷ್ಟಿರಬೇಕೆಂದು ಯಾರು ಬಯಸುತ್ತಾರೋ ಅವರಿಗೆ ಅಲ್ಲಿ ಅಷ್ಟಿಲ್ಲದ್ದು ಕಂಡರೆ ಅದು ಅಶ್ಲೀಲ
ಇದು ಎಲ್ಲಿದೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ
ಇದಕ್ಕಿರುವ ತುಂಬ ಚಿಕ್ಕ ಹೆಸರೆಂದರೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com