ಎಲ್ಲರಿಗೂ ಗೊತ್ತಿರುವ ಸಂಗತಿ
ಎಲ್ಲ ಪ್ರಶ್ನೆಗಳಿಗೂ ಉತ್ತರವಿದು
ಗೊತ್ತಿಲ್ಲದವರು ಗೊತ್ತಿಲ್ಲದಿದ್ದರೂ ತಮಗೆ ಗೊತ್ತಿಲ್ಲವೆಂದು ಬೇರೆಯವರಿಗೆ ಗೊತ್ತಾಗದಿರಲೆಂದು ಗೊತ್ತಿಲ್ಲವೆಂದು ಹೇಳುವುದೇ ಇಲ್ಲ
ಗೊತ್ತಾ ಎಂಬ ಪ್ರಶ್ನೆಗೆ ತಪ್ಪಿಸಿಕೊಳ್ಳಲು ಕೆಲವರು ಹೇಳುವ ಉತ್ತರ
ಗೊತ್ತು ಗುರಿ ಇಲ್ಲದವರ ಪ್ರತಿಕ್ರಿಯೆ
ವಿದ್ಯಾರ್ಥಿಗಳ ಬೆನ್ನು ಬಿಡದ ಪೀಡೆ
ವರ್ಷ ಮುಗಿದರೂ ಸಿಲೇಬಸ್ ಯಾವುದು ಎಂದು ಗೊತ್ತೇ ಆಗುವುದಿಲ್ಲ
ಇಡೀ ವರ್ಷ ತಿಲ್ಲಾನ ಹಾಡಿ ವರ್ಷದ ಕೊನೆಗೆ ಗೊತ್ತಿಲ್ಲಾನ ಹಾಡುತ್ತಾರೆ ಕೆಲವರು
ತನಗೆ ಗೊತ್ತಿಲ್ಲ ಎಂದು ಯಾರಾದರೂ ಹೇಳಿದರೆ ಗೊತ್ತಿದೆ ಎಂದು ಹೇಳುವುದರಿಂದ ಅಪಾಯವಿತ್ತು ಎಂದು ಭಾವಿಸಬಹುದು
ಗೊತ್ತಿರುವವರಿಗೆ ಇದರ ಸಮಸ್ಯೆಯಿಲ್ಲ
ಬೇರೆಯವರಿಗೆ ಗೊತ್ತಾಗದಂತೆ ಎಲ್ಲರೂ ಕಾಪಿಟ್ಟುಕೊಳ್ಳುವ ಅಜ್ಞಾನ
ಇದೂ ಒಂಥರಾ ಬೌದ್ಧಿಕ ನಾಸ್ತಿಕ್ಯ
ಗೊತ್ತಿದೆಯೆಂದರೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಹೇಳುವ ಉತ್ತರ
ಎಲ್ಲ ಕಳ್ಳರೂ ಪೊಲೀಸರ ಬಳಿ ಹೇಳುವ ಪ್ರಾಥಮಿಕ ಸುಳ್ಳು
ಪರೀಕ್ಷೆಯಲ್ಲಿ ಸಹಾಯಕ್ಕೆ ಬಾರದ ಉತ್ತರ
ಗೊತ್ತಿದೆ ಎನ್ನುವುದಕ್ಕಿಂತ ಕಡಿಮೆ ಶ್ರಮದಾಯಕ
-ವಿಶ್ವನಾಥ ಸುಂಕಸಾಳ
vishwasunkasal@yahoo.com