ಕಣ್ಣು

Updated on: 

  ದೇಹಕ್ಕೆ ಮುಖವೇ ಭೂಷಣ. ಮುಖಕ್ಕೆ ಕಣ್ಣೇ ಭೂಷಣ.
    ಈ ಇಂದ್ರಿಯವಿಲ್ಲದಿದ್ದರೆ ಉಳಿದ ಇಂದ್ರಿಯಗಳ ಕೆಲಸ ಕಡಿಮೆಯಾಗುತ್ತಿತ್ತು
    ಕಣ್ಣಿಲ್ಲದಿದ್ದರೆ ಕನ್ನಡಕವೂ ಇರುತ್ತಿರಲಿಲ್ಲ
    ಸುರೂಪ ಮತ್ತು ಕುರೂಪಗಳನ್ನು ಅಳೆಯುವ ಮಾಧ್ಯಮ
    ಬಾಯಿರುವುದು ಮಾತನಾಡುವುದಕ್ಕಾದರೂ ಕೆಲವೊಮ್ಮೆ ಬಾಯಿಂದಾಗದ ಮಾತನ್ನು ಕಣ್ಣು ತಲುಪಿಸುತ್ತದೆ
    ಕಣ್ಣು ಸೌಂದರ್ಯವನ್ನು ಆಸ್ವಾದಿಸುವುದಕ್ಕೂ ಮತ್ತು ಸುಂದರಿಯರ ಆಹ್ವಾನಿಸುವುದಕ್ಕೂ ಇರುವ ಏಕೈಕ ಸಾಮಗ್ರಿ
    ಕಣ್ಣು ಮನಸ್ಸಿನ ಕೈಗನ್ನಡಿ. ಮನಸ್ಸು ನಡಿ ಎಂದಲ್ಲಿ ಹೋಗಿ ಕೂರುವ ಸೇವಕ.
    ರೂಪದರ್ಶಿಗಳಿಗೂ ಮತ್ತು ರೂಪದರ್ಶನಕ್ಕೂ ಕಣ್ಣೇ ಮುಖ್ಯ
    ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬೇಕು ಅನಿಸಿದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಸಮೀಪ ದೃಷ್ಟಿದೋಷವೂ ಇರಬಹುದು
    ನಾಚಿಕೆ ಬಿಟ್ಟು ನಜರು ಹಾಯಿಸುವ ನಯ ನಾಜೂಕಿನ ಅಂಗ ಈ ನಯನ
    ಎಲ್ಲ ಇಂದ್ರಿಯಗಳಿಗಿಂತ ಮುಖ್ಯ ಸಾಕ್ಷಿ ಈ ಅಕ್ಷಿ
    ದೃಷ್ಟಿಯೆಂಬ ಬಾಣಗಳ ಬತ್ತಳಿಕೆ
    ಕಣ್ಣು ತೆರೆದರೆ ಸೃಷ್ಟಿ; ಕಣ್ಣು ಮುಚ್ಚಿದರೆ ಪ್ರಳಯ
    ಹೆಣ್ಣಿಗೆ ಕಣ್ಣೇ ಆಭರಣ, ಕಣ್ಣಿಗೆ ಹೆಣ್ಣೇ ಆವರಣ



-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com