ಪ್ರತಿಕ್ರಿಯೆ
ಕ್ರಿಯೆಯ ಬೆನ್ನಟ್ಟಿಸಿಕೊಂಡು ಬರುವ ಪ್ರಕ್ರಿಯೆ
ಎಲ್ಲಾ ಕ್ರಿಯೆಗೂ ತಕ್ಕ ಅಥವಾ ತಕ್ಕಮಟ್ಟಿಗಿನ ಪ್ರತಿಕ್ರಿಯೆ ಇದ್ದೇ ಇರುತ್ತದೆ
ಒಳ್ಳೆಯ ಕ್ರಿಯೆಗೆ ಮಾತ್ರ ಪ್ರತಿಕ್ರಿಯೆಗಳು ಬರುವುದೇ ಕಡಿಮೆ, ಬಂದರೂ ವಿರುದ್ಧವಾಗಿರುವುದೇ ಜಾಸ್ತಿ
ಮಾಡಿದ ಕ್ರಿಯೆಗಳಿಗೆಲ್ಲಾ ಪ್ರತಿಕ್ರಿಯೆ ನಿರೀಕ್ಷಿಸಿ ಕೂರಬಾರದು
ಕೆಲವರು ಕ್ರಿಯೆಗಿಂತ ಮೊದಲೇ ಪ್ರತಿಕ್ರಿಯೆಗೆ ಅಂಜುತ್ತಾರೆ
ವ್ಯಾಪಾರಕ್ಕೆ ನೀರಸ ಪ್ರತಿಕ್ರಿಯೆ ಬರುತ್ತಿದ್ದರೆ ನೀವು ನ್ಯಾಯಮಾರ್ಗ ಬಿಟ್ಟು ಬೇರೆ ಮಾರ್ಗ ಹಿಡಿದಿಲ್ಲ ಎಂದರ್ಥ
ಪ್ರತಿಕ್ರಿಯಿಸುವುದೇ ದೊಡ್ಡ ಕ್ರಿಯೆಟ ಫೇಸ್ಬುಕ್ಕಿನಲ್ಲಿ
ಕ್ರಿಯೆಗಿಂತ ಮೊದಲೇ ಪ್ರತಿಕ್ರಿಯೆ ಬಯಸುವವನೇ ಶುದ್ಧ ಸೋಮಾರಿ
ಉತ್ತಮ ಕಾರ್ಯ ಮಾಡುವಷ್ಟೇ, ಉತ್ತಮ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ನೀಡುವುದೂ ಪ್ರಧಾನವೇ
ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುತ್ತಿರಬಾರದು,
ಕೆಲವರು ಕ್ರಿಯಾಶೀಲರಾಗಿರುತ್ತಾರೆ; ಇನ್ನು ಕೆಲವರು ಪ್ರತಿಕ್ರಿಯಾಶೀಲರಾಗಿರುತ್ತಾರೆ
ಒಳ್ಳೆಯ ಕೆಲಸಕ್ಕೆ ತಕ್ಕುದಾದ ಪ್ರತಿಕ್ರಿಯೆಗಿಂತ ವಿರುದ್ಧವಾದ ಪ್ರತಿಕ್ರಿಯೆ ಬರುವ ಸಂಭವವೇ ಹೆಚ್ಚು
-ವಿಶ್ವನಾಥ ಸುಂಕಸಾಳ
vishwasunkasal@yahoo.com