ಎಲುಬಿಲ್ಲದಿದ್ದರೂ ಎಲುಬನ್ನು ಪುಡಿ ಪುಡಿ ಮಾಡಿಸುವಷ್ಟು ಸಾಮರ್ಥ್ಯವಿರುವಂಥದ್ದು
ಇದನ್ನು ನಿಯಂತ್ರಣದಲ್ಲಿಟ್ಟುಕೊಂಡವ ಮೃತ್ಯುವಿನ ಕೆನ್ನಾಲಿಗೆಯ ಸ್ಪರ್ಶ ಮಾಡುವುದಿಲ್ಲ
ಆಚಾರವಿಲ್ಲದ ನಾಲಿಗೆ ಮತ್ತು ವಿಚಾರವಿಲ್ಲದ ಮೆದುಳು ಇವೆರಡೂ ಘಾತಕ
ಹೆಂಡತಿ ಮಾಡಿದ ಹೊಸರುಚಿಯ ಟೇಸ್ಟ್ ನೋಡಲೆಂದೇ ಇರುವ ಅಂಗ
ಕೆಲವು ಹೆಂಡತಿಯರ ನಾಲಿಗೆಗೆ ಗಂಡನ ಕೈ ರುಚಿ ಆಸ್ವಾದಿಸುವುದೇ ಫುಲ್ಟೈಂ ವರ್ಕ್
ರಸವ ಸೃಜಿಸುತ್ತಲೇ ಇರುವ ರಸನಾ
ಲಾಲಾ ರಸಾರ್ಣವ, ಉಕ್ಕುಕ್ಕಿ ಬರುವ ರಸಗಂಗಾ
ಪಾಕಶಾಸ್ತ್ರದ ಪಿತಾಮಹ, ರಸಶಾಸ್ತ್ರದ ಪ್ರವರ್ತಕ
ದೇಹಕ್ಕೆ ಮುಪ್ಪುಂಟು. ಮನಸ್ಸಿಗೆ ಮತ್ತು ನಾಲಿಗೆಗೆ ಮುಪ್ಪಿಲ್ಲ
ಹಲ್ಲುಗಳೆಂಬ ಭದ್ರಕೋಟೆಯೊಳಗೆ ಅವಿತಿರುವ ಶೂರ. ಹಲ್ಲುಗಳು ಬಿದ್ದರೂ ಉಳಿವ ಪೋರ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಾಲಿಗೆಗೆ ಕುರ್ಕುರೆ
ಪಿತ್ತ ಜಾಸ್ತಿಯಾದರೆ ತಿಂದಿದ್ದೆಲ್ಲ ಅರುಚಿ. ವಿತ್ತ ಜಾಸ್ತಿಯಾದರೆ ರುಚಿ ನೋಡಲೂ ಸಮಯವಿಲ್ಲ
ಇದರ ತುದಿಯಲ್ಲೇ ಷಡ್ರಸಗಳೂ ನರ್ತಿಸುತ್ತವೆ.
-ವಿಶ್ವನಾಥ ಸುಂಕಸಾಳ
vishwasunkasal@yahoo.com