ನಾಲಿಗೆಯೇ ವ್ಯಕ್ತಿತ್ವದ ಕೈಗನ್ನಡಿ. ಸ್ವಚ್ಛವಿಲ್ಲದಿದ್ದರೆ ಬಾಯಿವಾಸನೆಯ ಮುನ್ನುಡಿ
ನಾಲಿಗೆಗೆ ಮುಪ್ಪಿಲ್ಲ ಎಂದರೂ ತಪ್ಪಿಲ್ಲ
ನಾಲಿಗೆ ನುಡಿದಿದ್ದೆಲ್ಲ ನಲ್ನುಡಿಯಲ್ಲ,
ನಾಲಿಗೆಯಂಥ ವ್ಯಕ್ತಿತ್ವ ಪಡೆಯಬೇಕು. ಮೆತ್ತಗಿರಬೇಕು, ತಪ್ಪು ಮಾಡಿದಾಗ ಜಾರಿಕೊಳ್ಳುವಂತಿರಬೇಕು.
ನಾಲಿಗೆ ಮೆತ್ತಗಿದ್ದರೂ ಅದು ನುಡಿಯುವ ಮಾತುಗಳು ಮೆತ್ತಗಲ್ಲ
ಕೆಂಪಾದ ನಾಲಿಗೆ ಕೆನ್ನಾಲಿಗೆ. ಉದಾ- ಪಾನ್ಬೀಡಾ ಹಾಕಿದ ನಾಲಿಗೆ
ನಾಲಿಗೆ ಒಳ್ಳೆಯದಾದರೆ ನಾಡಿಗೂ ಒಳ್ಳೆಯದು, ನಾಳೆಗೂ ಒಳ್ಳೆಯದು
ತೋಚಿದ್ದೆಲ್ಲಾ ಹೇಳುವ ನೀಚ ಬುದ್ಧಿಯ ಬಿಟ್ಟರೆ ಪೇಚು ಪಡುವುದು ತಗ್ಗುವುದು,
ಕೆಲವು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ನಾಲಿಗೆಯನ್ನು ಬೇಕಾದಂತೆ ಹರಿಯಬಿಡುವುದರ ಹಿಂದೆ ತಮಗೆ ಮಾರ್ಕೆಟ್ ಇಳಿಯುವ ಭಯ ಕೆಲಸ ಮಾಡಿರುತ್ತದೆ
ನಾಲಿಗೆ ಬಿಗಿ ಹಿಡಿದು ಮಾತನಾಡು ಎಂದು ಹೆಂಡತಿಗೆ ಆದೇಶ ಮಾಡಿದರೆ ಖಂಡಿತ ನೀವು ನಿಮ್ಮ ನಾಲಿಗೆಯನ್ನು ಕಳೆದುಕೊಳ್ಳುತ್ತೀರಿ!
ನಾಲಿಗೆಗೆ ನಾಲೆಯ ಕಟ್ಟಲಾಗದು
ನಾಲಿಗೆ ಆಡಬಾರದ ಶಬ್ದಗಳನ್ನೆಲ್ಲ ಒಟ್ಟುಸೇರಿಸಿ ನಾಲಾಯಕ್ ಎಂದು ಹೆಸರಿಡಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com