ಬೇಡು

Updated on: 

    ನೀಡು ಶಬ್ದದ ವಿರುದ್ಧಪದ
NEED  ಇರುವಾಗ ಕೈ ಚಾಚಿ ನೀಡಿ ಎಂದು ಕೇಳುವ ಕ್ರಿಯೆ
    ಮನದ ಬೇಡಿಕೆಗಳಿಗೆಲ್ಲ ಬೇಡ ಎಂಬ ಬ್ರೇಕ್ ಹಾಕದೇ ಇರುವುದರ ಪರಿಣಾಮ
    ಬೇಡರ ಅಥವಾ ಬೇಡರವರ(ಹೊಟ್ಟೆ)ಪಾಡು
    ದಾನಕ್ಕಾಗಿ ಬಯಸುವ ದೀನಾವಸ್ಥೆ
    ಕಾಡುವ ಬಡತನದ ಪರಿಣಾಮ
    ಭಕ್ಷಣೆಗೂ ಇಲ್ಲದಿದ್ದಾಗ ಎತ್ತುವ ಭಿಕ್ಷೆ ಮತ್ತು ದೇವರು ನೀಡುವ ಅತಿ ದೊಡ್ಡ ಶಿಕ್ಷೆ
    ಬೇಡುವ ಕೈ ಕೆಳಗಿರುತ್ತದೆ ಮತ್ತು ನೀಡುವ ಕೈ ಮೇಲಿರುತ್ತದೆ.
    ಅಯ್ಯೋ ಎಂಬ ಮನದೊಳಗಿನ ಭಾವ ಅಯ್ಯಾ ಎಂಬ ಶಬ್ದದ ರೂಪಾಂತರದೊಡನೆ ಹೊರಡುವ ಸಂದರ್ಭ
    ಗಳಿಕೆಗಿಂತ ಬೇಡಿಕೆ ಹೆಚ್ಚಿರುವುದೇ ಬೇಡುವಿಕೆಗೆ ಮೂಲ ಕಾರಣ
    ಪ್ಲೀಸ್ ಎನ್ನುತ್ತಾ ಪೀಡಿಸುವುದು ಅಥವಾ ಕಿಔಊಆಉಇಸುವುದು
    ಯಾರ ಬಳಿ ಬೇಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ. ದೇವರಲ್ಲಿ ಬೇಡುವುದು ಗೌರವಪೂರ್ಣ ದೈನ್ಯ
    ಯಾರ ಬಳಿಯೂ ಬೇಡುವಂಥ ಸ್ಥಿತಿಯ ಕೊಡದಿರಪ್ಪಾ ಎಂಬುದೇ ದೇವರಲ್ಲಿ ಬೇಡಿಕೊಳ್ಳಬಹುದಾದ ಪರಿಪೂರ್ಣ ಬೇಡಿಕೆ
    ದಾರಿದ್ರ್ಯ ತುಂಬಿ ತುಳುಕಾಡುವಾಗಿನ ದರಿದ್ರ ಅವಸ್ಥೆ.
    ಯೋಚನೆಯಿಲ್ಲದೇ ಮಾಡಿದ ಯೋಜನೆಗಳ ಪರಿಣಾಮವಾಗಿ ಒದಗಿದ ಯಾಚನಾ ಸ್ಥಿತಿ
    ಆಲಸ್ಯ ಮತ್ತು ನಿಷ್ಕ್ರಿಯತೆಯ ಫಲಿತ
    ಸ್ವಾಭಿಮಾನಿಯ ಶತ್ರು

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com