ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನೆಂಟರು ಹೊಸ ಅಳಿಯನಾಗಿದ್ದಾಗ ತೋರುವ ಆದರಾತಿಥ್ಯವನ್ನು ನಂತರದಲ್ಲಿ ಯಾಕೆ ತೋರುವುದಿಲ್ಲ?
ಮೊದಲೆರಡು ದಿನ ಸತ್ಕಾರ, ನಂತರ ಅಡುಗೆ ಸಖತ್ ಖಾರ ಎಂದು ಡುಂಡಿರಾಜರ ಚುಟುಕ ಓದಿಲ್ಲವೇ.
ಮಾಗಡಿ ಶ್ರೀನಿವಾಸ, ಬಾಲೆಕಟ್ಟೆ, ರಾಮನಗರ, 9902797767
ನೀವು ಹೆಣ್ಣಿನ ಮನೋವಿಜ್ಞಾನದಲ್ಲಿ ಪಿಎಚ್ಡಿ ಮಾಡಲು ಹೊರಟಿದ್ದೀರಂತೆ?
ಜೀವಮಾನದಲ್ಲಿ ಡಾಕ್ಟರೇಟ್ ಸಿಗೋದಿಲ್ಲ ಬಿಡು!
ಬರ್ಕಲಿ ರಮೇಶ್, ಕಿರಗಂದೂರು ಮಂಡ್ಯ, 9008741348
ಒಂದು ಮಾತಿಲ್ಲ. ಕಥೆಯಿಲ್ಲ. ಕಣ್ ಹೊಡೆದು ನಕ್ಕುಬಿಡುತ್ತಿದ್ದಾಳೆ. ಏನೆಂದು ತಿಳಿಯಲಿ?
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ ಅಂತ ಹಳೇ ಸಾಂಗು ಬಿಡಬೇಕಿತ್ತು..
ಉಜ್ಜನಿ ಜಲೇಂದ್ರ, 8971857200
ಈಗಿನ ಹುಡುಗಿಯರ ವೇಲ್ ಇರಬೇಕಾದ ಜಾಗದಲ್ಲಿ ಇರುವುದಿಲ್ಲವಲ್ಲ?
ಹುಡುಗರ ಕಣ್ಣೂ ನೋಡಬೇಕಾದಲ್ಲಿ ನೋಡಲ್ಲವಲ್ಲ!
ರಂಜಿತ ಎಸ್. ರಣಸಿಂಗೆ, ಅಥಣಿ, 8123679919
ಹುಡುಗನ ಅನುಭವ, ಹುಡುಗಿಯ ಮನೋಭಾವ ಎರಡೂ ಒಂದಾದರೆ?
ಅದೇ ಹೊಸ ಅನುಭಾವ!
ಬಾಣಭಟ್ಟ