ಪಿ.ಎಸ್. ಜಯತೀರ್ಥ, ಬೆಂಗಳೂರು
ಸುಧಾ ಬರಗೂರು ಕೆಜೆಪಿ ಸೇರಿದ್ದಾರೆ. ಸದಾ ಕೋಪದಿಂದಿರುವ ಯಡಿಯೂರಪ್ಪನವರನ್ನು ನಗಿಸುತ್ತಾರೆಯೇ?
ಸುಧಾ ಬರಗೂರು ಅವರೇ ನಗು ಮರೆಯದಿದ್ದರೆ ಸಾಕು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ದಾಳಿಂಬೆ, ಮೂಸುಂಬಿ, ಕಿತ್ತಳೆ ಈ ಎಲ್ಲಾ ಹಣ್ಣುಗಳಿದ್ದರೂ, ಹೆಣ್ಣನ್ನು ನಿಂಬೆಹಣ್ಣಿಗೆ ಹೋಲಿಸುತ್ತಾರಲ್ಲಾ ಯಾಕೆ?
ಅವರು ಸಂಸಾರದಲ್ಲಿ ಹುಳಿ ಹಿಂಡುತ್ತಾರೆ ಎಂಬ ಕಾರಣಕ್ಕೆ ಎಂಬುದು ಮಹಿಳಾ ವಿರೋಧಿಗಳ ಮಾತು!
ವಿಷ್ಣುಶಂಕರ್, ಶಿವಮೊಗ್ಗ
ಶೋಭಕ್ಕ ಕರ್ನಾಟಕದಲ್ಲಿ ಗುಲಾಬಿ ಗ್ಯಾಂಗ್ ಸಂಘಟನೆ ಶುರುಮಾಡಿದ್ರೆ ಹೇಗೆ?
ಅವರು ಈಗಾಗಲೇ 'ಲಾಬಿ' ಗ್ಯಾಂಗ್ ಆರಂಭಿಸಿದ್ದಾರೆ. ಮೊದಲಕ್ಷರ ಬಿಟ್ಟು ಹೋಗಿದೆ!
ರಮೇಶ್ ಭಟ್ ಆವರ್ಸೆ, ಕುಂದಾಪುರ, 9164276058
ಭ್ರಷ್ಟಾಚಾರ ಮಾಡಬಹುದೆಂದು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ (ಅಧ್ಯಯನ) ಕೇಂದ್ರ ಸ್ಥಾಪಿಸಿದರೆ ಹೇಗೆ?
ಅಲ್ಲೂ ಭ್ರಷ್ಟಾಚಾರವಾಗಿಬಿಟ್ಟರೆ ಎಂಬ ಭಯವಂತೆ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ 9900739725
ಮಿಡಿ ಹಾಕಿದ ಹುಡುಗಿಯರ 'ಕುಡಿ' ನೋಟಕ್ಕೆ ನೀವೆಂದಾದ್ರೂ ಸಿಲುಕಿದ್ದೀರಾ?
ಕುಡಿ ನೋಟ ಕಿಡಿ ನೋಟವಾಗಲು ಹೆಚ್ಚು ಹೊತ್ತು ಬೇಡ.
-ಬಾಣಭಟ್ಟ