ಮಾತು ಬೆಳ್ಳಿ, ಮೌನ ಬಂಗಾರ, ಹಾಗಾದರೆ ನಗು?

Updated on: 

ಕೆ. ಎಂ. ಲಿಂಗರಾಜು, 9916021365
ಕೇಂದ್ರ ಗೃಹ ಇಲಾಖೆ ಭಯೋತ್ಪಾದಕರ ಕ್ಷೇಮನಿಧಿಯನ್ನು ಸ್ಥಾಪಿಸುವುದಂತೆ?
ಆ ಇಲಾಖೆ ನಿಭಾಯಿಸುತ್ತಿರುವವರ ಪಿಂಚಣಿ ನಿಧಿಯ ಲೆಕ್ಕಾಚಾರ ಮಾಡಿ ಮನೆಗೆ ಕಳುಹಿಸುವುದೇ ಅದಕ್ಕಿಂತ ಉತ್ತಮ ಮಾರ್ಗ ಎಂಬುದು ಹೆಚ್ಚಿನವರ ಅಭಿಪ್ರಾಯ!

ಹರಳಹಳ್ಳಿ ಪುಟ್ಟರಾಜು, 9632838088
ಮಾತು ಬೆಳ್ಳಿ, ಮೌನ ಬಂಗಾರ, ಹಾಗಾದರೆ ನಗು?
ಈ ಪ್ರಶ್ನೆಯನ್ನು ಸದಾನಂದಗೌಡರಿಗೆ ವರ್ಗಾಯಿಸಲಾಗಿದೆ!

ಕಂಚಗನಹಳ್ಳಿ ಧನಂಜಯ, 9141308498
ನಿಮ್ಮನ್ನು ಕಲಿಯುಗದ ಏಕಲವ್ಯ ಎಂದು ಕರೆಯಬಹುದೇ?
ಇದೇನೋ ಬೆರಳು ಎಗರಿಸುವ ಸಂಚಿನಂತಿದೆ!

ಕೆನ್ನಾಳು ಭಾಸ್ಕರ್, ಪಾಂಡವಪುರ, 9036416729
ಚಳಿ ಬಿಟ್ಟು ಪ್ರಶ್ನೆ ಕೇಳಬೇಕೆಂದಿದ್ದೇನೆ, ಉತ್ತರ ನೀಡುವಿರಾ?
ಮಫ್ಲರ್ ಕಟ್ಟಿಕೊಂಡೇ ಕೇಳಿ ಪರವಾಗಿಲ್ಲ, ಚಳಿ ಬಿಡಿಸುವ ಉತ್ತರವನ್ನೇ ಕೊಡೋಣ!

ಮಾಗಡಿ ಶ್ರೀನಿವಾಸ, 9902797767
ನೀರೆಗೂ ಸೀರೆಗೂ ಸಂಬಂಧ ಕಲ್ಪಿಸಬಹುದೇ?
ಸಂಬಂಧವನ್ನೂ ಕಲ್ಪಿಸಬಹುದು, ನೀರೆಗೆ ಸೀರೆ ಸಂಬಂಧವಿಲ್ಲದೆಯೂ ಕಲ್ಪಿಸಿಕೊಳ್ಳಬಹುದು!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com