ನಿಮಗೇಕೆ ಆ ಉಸಾಬರಿ?

Updated on: 

ಟಿಪ್ಪು ಒಬ್ಬ ಮುಸಲ್ಮಾನ ಎಂಬ ಕಾರಣಕ್ಕೆ, ಮುಸ್ಲಿಂರ ಓಟುಗಳು 'ಕೈ' ತಪ್ಪಿ ಹೋಗುವ ಭಯದಿಂದ ಚರಿತ್ರೆಯನ್ನು ತಿರುಚಿ ಹೇಳುತ್ತಿರುವವರು ಕಾಂಗ್ರೆಸ್‌ನವರು ಮತ್ತು ಸರ್ಕಾರಿ ಬುದ್ಧಿಜೀವಿಗಳೇ ಹೊರತು ಭೈರಪ್ಪ ಮತ್ತು ಚಿದಾನಂದಮೂರ್ತಿಯವರಲ್ಲ. ಈ ಸತ್ಯವನ್ನು ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಅವರು ಮೊದಲು ಅರಿಯಬೇಕು. ಕಸಬ್ ಒಬ್ಬ ಮುಸಲ್ಮಾನ ಎಂಬ ಕಾರಣದಿಂದ ವರ್ಷಾನುಗಟ್ಟಲೆ ಅವನಿಗೆ "ಸ್ಟಾರ್‌" ಆತಿಥ್ಯಕ್ಕೆ ಕೋಟಿಗಟ್ಟಲೆ ಹಣ ದುಂದು ವೆಚ್ಚ ಮಾಡಿದವರು ಯಾರು? ಕಾಂಗ್ರೆಸ್ ಸರ್ಕಾರವಲ್ಲವೆ? ದಿಲ್ಲಿ ಮೇಡಂ ಮಾತಾಡು ಎಂದಾಗ ಮಾತ್ರ ಮಾತನಾಡುವ ಪ್ರಧಾನಿ ನಿಮ್ಮ ಪಕ್ಷದವರಲ್ಲವೆ ವಿಶ್ವನಾಥ್? ಸರ್ಕಾರ, ಪ್ರಧಾನಿ ಮುಖ್ಯವೋ ಅಥವಾ ಪಕ್ಷವೋ? ಎರಡು ರಾಷ್ಟ್ರಗಳ ನಡುವೆ ಭಾವೈಕ್ಯ ಪುನರ್ ಸ್ಥಾಪನೆಗಾಗಿ ಕ್ರಿಕೆಟ್ ಆಡಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಆಗಲೇ ಜಮ್ಮುವಿನ ಗಡಿಯಲ್ಲಿ ಕಾಯುತ್ತಿದ್ದ ನಮ್ಮ ಸೈನಿಕರ ರುಂಡ ಮುಂಡ ಬೇಧಿಸಿದವರು ಛೇದಿಸಿದವರು ಯಾರು? ನಿಮ್ಮ ಮೇಡಂಗೆ ಹೇಳಿ ಮೊದಲು ಅದನ್ನು ಪ್ರತಿಭಟಿಸಿ. ಭೈರಪ್ಪನವರ ಆರೋಗ್ಯ ನೋಡಿಕೊಳ್ಳಲು ಅವರ ಮನೆಯವರಿದ್ದಾರೆ ಜತೆಗೆ ಅವರ ಅಪಾರ ಅಭಿಮಾನಿಗಳಿದ್ದಾರೆ. ನಿಮಗೇಕೆ ಆ ಉಸಾಬರಿ?
-ಮು.ಅ. ಶ್ರೀರಂಗ, ದೊಡ್ಡಬಳ್ಳಾಪುರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com