ಸಂದರ್ಶಕ: ಎರಡು ರೈಲುಗಳು ಒಂದೇ ಲೈನಲ್ಲಿ ಬಂದರೆ ಏನ್ಮಾಡ್ತೀಯಾ?
ಕೋಲ್ಯ: ಸರ್ ಕೆಂಪು ದೀಪ ತೋರಿಸ್ತೀನಿ.
ಸಂದರ್ಶಕ: ಕೆಂಪು ದೀಪ ಇರಲಿಲ್ಲ ಅಂದ್ರೆ?
ಕೋಲ್ಯ: ಟಾರ್ಚ್ ಬೆಳಕು ಬಿಡ್ತೀನಿ
ಸಂದರ್ಶಕ: ಟಾರ್ಚ್ ಇಲ್ಲ ಅಂದ್ರೆ?
ಕೋಲ್ಯ: ನನ್ನ ಕೆಂಪು ಶರ್ಟ್ ಬಿಚ್ಚಿ ತೋರಿಸ್ತೀನಿ
ಸಂದರ್ಶಕ: ನೀನು ಕೆಂಪು ಶರ್ಟ್ ಹಾಕಿಕೊಂಡಿರಲಿಲ್ಲ ಅಂದ್ರೆ?
ಕೋಲ್ಯ: ನನ್ನ ಗೆಳೆಯ ತಿಮ್ಮನನ್ನು ಫೋನ್ ಮಾಡಿ ಕರೀತೀನಿ!
ಸಂದರ್ಶಕ(ಗೊಂದಲಗೊಂಡು): ಯಾಕೆ?
ಕೋಲ್ಯ: ಅದೇನಂದ್ರೆ, ಅವನು ಇದುವರೆಗೂ ಎರಡು ಟ್ರೇನು ಢಿಕ್ಕಿ ಹೊಡೆಯೋದನ್ನ ನೋಡಿಲ್ವಂತೆ ಅದಕ್ಕೇ...!