ತಿಮ್ಮನ ಗಿಳಿ ಪ್ರತಿ ದಿನ ಕೋಲ್ಯನನ್ನು ನೋಡಿ ಕೂಗುತ್ತಿತ್ತು: 'ಏನಲೇ ಮಗನೇ...'
ಕೋಲ್ಯ ಒಂದು ದಿನ ತಿಮ್ಮನ ಬಳಿ ಹೋಗಿ ಗಿಳಿಯ ಬಗ್ಗೆ ದೂರು ಕೊಟ್ಟ. ತಿಮ್ಮ ಗಿಳಿಗೆ ಚೆನ್ನಾಗಿ ಬೈದ.
ಮರುದಿನ ಕೋಲ್ಯ ಗಿಳಿಯ ಸನಿಹದಿಂದ ಹೊರಟ. ಗಿಳಿ ಮಾತನಾಡಲಿಲ್ಲ. ಸ್ವಲ್ಪ ದೂರ ಹೋದ ಮೇಲೆ ಕೋಲ್ಯ ಮೆಲ್ಲಗೆ ಹಿಂದಿರುಗಿ ಗಿಳಿಯತ್ತ ನೋಡಿದ.
ಗಿಳಿ(ನಸುನಗುತ್ತಾ): ನಾನು ಏನು ಹೇಳ್ಬೇಕು ಅನ್ಕೊಂಡಿದೀನೋ ಅರ್ಥ ಆಗಿರ್ಬೇಕಲ್ಲ?