ಒಂದು ಸೇತುವೆ ಕಟ್ಟಲು ಟೆಂಡರ್ ಕರೆಯಲಾಯಿತು.
ತಿಮ್ಮ: ನಾನು 30 ಲಕ್ಷ ರುಪಾಯಿಯಲ್ಲಿ ಸೇತುವೆ ಕಟ್ಟುತ್ತೇನೆ..
ಅಧಿಕಾರಿ: ಅದ್ಹೇಗೆ?
ತಿಮ್ಮ: 10 ಲಕ್ಷ ನನಗೆ, 10 ಲಕ್ಷ ಸಾಮಗ್ರಿಗಳಿಗೆ, ಇನ್ನುಳಿದ 10 ಲಕ್ಷ ನಿಮಗೆ
ಕೋಲ್ಯ: ನಾನು 90 ಲಕ್ಷದಲ್ಲಿ ಸೇತುವೆ ಕಟ್ಟುತ್ತೇನೆ. ನನಗೇ ಕೊಡಿ!
ಅಧಿಕಾರಿ: ಅಷ್ಟೊಂದು ದುಡ್ಡು ಯಾಕೆ?
ಕೋಲ್ಯ: 30 ಲಕ್ಷ ನನಗೆ, 30 ಲಕ್ಷ ನಿಮಗೆ..
ಅಧಿಕಾರಿ: ಹಾಗಿದ್ರೆ ಸೇತುವೆ ಯಾರು ಕಟ್ತಾರೆ?
ಕೋಲ್ಯ: ತಿಮ್ಮ ಕಟ್ತಾನೆ, ಅವನಿಗೆ 30 ಲಕ್ಷ ಕೊಟ್ಟರಾಯ್ತು!
(ಟೆಂಡರ್ ಕೋಲ್ಯನಿಗೇ ಸಿಕ್ಕಿತು ಎಂದು ಪ್ರತ್ಯೇಕವಾಗಿ ಹೇಳಬೇಕೇ?)