ಇದು ಇದ್ದರೂ ಲಕ್ಷ ಸತ್ತರೂ ಲಕ್ಷ
ಸಕಲ ಜೀವಿಗಳುಸಿರು
ಮಾನವನ ಲಕ್ಷ್ಯ ಇದರ ಮೇಲೆ ಬೀಳದಿದ್ದರೆ ಮಾತ್ರ ಇದಕ್ಕೆ ನೆಮ್ಮದಿಯುಸಿರು
ವೃಕ್ಷ ಉಸಿರು ನೀಡುತ್ತದೆ. ಬದಲಿಗೆ ಮಾನವ ಅದರ ಉಸಿರು ಕೀಳುತ್ತಾನೆ
ವೃಕ, ಬಕ, ಪಿಕಗಳಿಗೆಲ್ಲ ಆಶ್ರಯವಿದು
ವೃಕ್ಷಃ ರಕ್ಷತಿ ರಕ್ಷಿತಃ
ಬೀಜದ ಭವಿಷ್ಯತ್ ಪದ
ಶಾಖ ಹೀರಿ ನೆರಳು ನೀಡುವ ಅಸದೃಶ ಪ್ರಭೇದ
ಹಸಿರು ಮತ್ತು ಉಸಿರಿನ ದಾತಾ
ಇರುವಲ್ಲೇ ತವರು ಇದರದ್ದು
ಎಲೆಯಿಂದಲೂ ಉಸಿರು ಜಿನುಗಿಸುವ ಎಲ್ಲೆಯಿಲ್ಲದ ಉದಾರಿ
ಜೀವಿಗಳಿಗೆ ಶುದ್ಧ ಗಾಳಿಯನ್ನು ನೀಡುವ ಮೂಲಕ ನರನ ಮರಣವನ್ನು ದೂರ ಮಾಡುವ ಮರ
ಭೂಮಿಗೊಂದು ವರ ಈ ಸ್ಥಾವರ
ಮನೆ ಕಟ್ಟಲು, ರಸ್ತೆ ನಿರ್ಮಾಣಕ್ಕೆ, ಅಣೆಕಟ್ಟೆಗೋಸ್ಕರ ಬಲಿಯಾಗೋದು ಇದೇ
ವಿಶ್ವನಾಥ ಸುಂಕಸಾಳ