ಸಂಬಂಧ

Updated on: 

ಬಂಧನದ ಸಂ-ಕೇತವೇ ಸಂ-ಬಂಧ
    ದುಡ್ಡಿನ ವಾಸನೆ ಇರುವಲ್ಲಿ ಕುಳಿತುಕೊಳ್ಳುವ ನೋಣ
    ಬಿಟ್ಟರೆ ಸಿಗದು ತೊಟ್ಟರೆ ಸಾಗದು
    ಬಂದು ಹೋಗುವ ಬಂಧುಗಳ ನಡುವೆ ಅಂಟು ಈ ನಂಟು
    ದೊಡ್ಡಸ್ತಿಕೆಯವರ ಜೊತೆ ಬೆಳಸಬಾರದ ನೆಂಟಸ್ತಿಕೆ
    ಸಂಬಂಧ ಗಟ್ಟಿಯಿದ್ದರೆ ಅದು ಸುಮಬಂಧ (ಹೂ ಹಾರ), ಕೆಟ್ಟರೆ ಅಸಂಬದ್ಧ
    ಸರಿಯಿದ್ದರೆ ಪೆಪ್ಪರಮೆಂಟು, ಹಳಸಿದರೆ ಪೆಪ್ಪರ್ (ಖಾರ) ಮೆಂಟು
    ಹುಟ್ಟುತ್ತಲೇ ಬಂಧಿಸುವಂತದ್ದು, ಸಾಯುವ ತನಕ ಸಂಧಿಸುವಂತದ್ದು
    ಇದು ಜೇಡರ ಬಲೆ. ಸೃಷ್ಟಿಸಿಕೊಂಡವರನ್ನೇ ಸಂಕಟಕ್ಕೆ ನೂಕುತ್ತದೆ
    ಕಟ್ಟಿಕೊಂಡರೆ ಅದು ಸಕ್ರಮ, ಇಟ್ಟುಕೊಂಡರೆ ಅದು ಅಕ್ರಮ
    ಸನ್ಯಾಸಿಯನ್ನೂ ಬಿಡದು
    ಕೆಲವೊಮ್ಮೆ ಮುಳುಗುವ, ಹಲವೊಮ್ಮೆ ತೇಲುವ ಹಡಗು ಈ ರಿಲೇಷನ್-ಶಿಪ್
    ಕೆಲವೊಮ್ಮೆ ಹಾಲು ಜೇನು ಸೇರಿದಂತೆ, ಹಲವೊಮ್ಮೆ ಹಾವು  ಚೇಳು ಸೇರಿದಂತೆ
    ದುಡ್ಡಿದ್ದವಗೆ ಊರೆಲ್ಲ ಸಂಬಂಧಿಕರೇ
    ಸಂಬಂಧಗಳ ಬಗ್ಗೆ ಸಂಬಂಧವಿಲ್ಲದಂತಿರುವವ ನೆಮ್ಮದಿಯಿಂದಿರುತ್ತಾನೆ
    ಚಂದವಿದ್ದಾರೆಂಬ ಕಾರಣಕ್ಕೆ ಸಂಬಂಧ ಬೆಳೆಸಬಾರದು, ಬದುಕಿನ ಅಂದ ಕೆಟ್ಟೀತು

ವಿಶ್ವನಾಥ ಸುಂಕಸಾಳ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com