ಹದತಪ್ಪಿದರೆ ಯುದ್ಧದ ಕದ ತಟ್ಟಬೇಕಾದ ಅಪಾಯವುಳ್ಳದ್ದು
ವರಿಸುವಿಕೆ-ಸಂಬಂಧದ ಆರಂಭ. ಡೈವರ್ಸ್ವಿಕೆ ಸಂಬಂಧದ ಅಂತ್ಯ
ಎಷ್ಟು ಜನ ಸಂಬಂಧಿಕರಿದ್ದಾರೆ ಎನ್ನುವುದಕ್ಕಿಂತ ಸಂಬಂಧ ಎಷ್ಟು ಉತ್ತಮವಾಗಿದೆ ಎನ್ನುವುದು ಮುಖ್ಯ
ಪ್ರೀತಿಯೆಂಬ ಮುಲಾಮನ್ನು ಜೊತೆಯಲ್ಲೇ ಇರಿಸಿಕೊಳ್ಳುವುದು ಸಂಬಂಧದ ಬಾಳಿಕೆಗೆ ಉತ್ತಮ
ಸಂಬಂಧಗಳೆಲ್ಲ ಸ್ವರ್ಗದಲ್ಲೇ ನಿಶ್ಚಯಗೊಳ್ಳುತ್ತವೆ. ಆದರೆ ಅನುಭವಿಸುವಾಗ ಮಾತ್ರ ನರಕದ ದರ್ಶನವಾಗುತ್ತದೆ
ಸಂಬಂಧ ಮತ್ತು ಪ್ರೀತಿಗೆ ತಲೆ ಮತ್ತು ಕೂದಲಿನಂಥ ಸಂಬಂಧ. ಪ್ರೀತಿ ಕಡಿಮೆಯಾದಂತೆಲ್ಲ ಸಂಬಂಧ ಬೋಳಾಗುತ್ತದೆ
ಕಡಿಮೆ ಸಂಬಂಧಿಕರುಳ್ಳವರಿಗೆ ಹೆಚ್ಚು ಆಯುಷ್ಯ ಎಂಬುದು ಅನುಭವಸ್ಥರ ನುಡಿ
ದುಡುಕಿದರೆ ಜಡಕಾಗುವುದು
ಮನೆಯ ವಿಷಯದಲ್ಲಿ ನನಗೆ ಸಂಬಂಧವಿಲ್ಲ ಎಂಬಂತೆ ಕೆಲವರಿರುತ್ತಾರೆ. ಅವರು ಊರಿಗೆ ದೊಡ್ಡವರಾಗುತ್ತಾರೆ
ದೂರದ ಸಂಬಂಧ ಕಣ್ಣಿಗೆ ನುಣ್ಣಗೆ. ಹತ್ತಿರದ ಸಂಬಂಧ ಕಿಸೆಗೆ ನುಣ್ಣಗೆ
ಸಂಬಂಧ ಹತ್ತಿರವಿರಬೇಕು. ಸಂಬಂಧಿಕರು ಮಾತ್ರ ದೂರವಿರಕಬೇಕು
ಕೆಲವೊಮ್ಮೆ ಸಂಬಂಧಿಕರು ಹತ್ತಿರವಿರುತ್ತಾರೆ. ಸಂಬಂಧ ದೂರವಾಗುತ್ತಿರುತ್ತದೆ
- ವಿಶ್ವನಾಥ ಸುಂಕಸಾಳ