ಕಾಲುಚೀಲ ಹಾಳಾಗದಂತೆ ಧರಿಸುವ ಕವಚ
ಇದನ್ನು ಧರಿಸಿದವನ ಕಾಲು ನೆಲದ ಮೇಲಿರುವುದಿಲ್ಲ
ಧರಿಸುವಾಗ ಮತ್ತು ಕಳಚುವಾಗ ಕೈಯ್ಯ ಅಪೇಕ್ಷೆಯಿರುವ ಕಾಲು ಕವಚ
ಹಳೆಯದಾದರೆ ಪಾದ ಶೂ-ಲ, ಹೊಸದಾದರೆ ಪಾದ ಚೀಲ
ಪಾದದ ಕೊಳೆಯನ್ನು ಮರೆಮಾಚುವ ಸಾಧನ
ನಿತ್ರಾಣಗೊಂಡಾಗ ಪಾದತ್ರಾಣವೂ ಭಾರವೇ
ಇದನ್ನು ಧರಿಸುವುದರಿಂದ ಕಾಲು ಮಡಚಿ ಕುಳಿತುಕೊಳ್ಳಲಾಗುವುದಿಲ್ಲ
ಇದನ್ನು ತೊಳೆಯುವಂತಿಲ್ಲ. ಫಳಫಳ ಹೊಳೆಯುವಂತೆ ಉಜ್ಜಬೇಕು
ನಿಮ್ಮನ್ನು ಒಂದು ಕ್ಷಣ ಒಂದೇ ಕಾಲಿನಲ್ಲಿ ನಿಲ್ಲುವಂತೆ ಮಾಡುವ ವಸ್ತು
ದೇವಸ್ಥಾನ ಮತ್ತು ಮದುವೆ ಮನೆಗಳಿಗೆ ಇದು ನಾಲಾಯಕ್ಕು
ಶೂ ಎಸೆದು ಕೇಸ್ ಎದುರಿಸುತ್ತಿರುವ ಪ್ರಸಂಗಕ್ಕೆ ಶೂಕೇಸ್ ಎನ್ನುಬಹುದು
ಮಿರಿಮಿರಿ ಮಿನುಗುವಂತಿಟ್ಟು ಕೊಳ್ಳಬೇಕು, ಕಿರಿಕಿರಿಯಾದರೂ
ಶೂವನ್ನೇ ಆಯುಧವಾಗಿಸಿಕೊಳ್ಳುವುದಕ್ಕೆ 'ಶೂ ಬಾಣ' ಎನ್ನಬಹುದು
ಆಶು(ವೇಗವಾಗಿ) ನಡೆಯಬೇಕೆಂದರೆ ಶೂ ಧರಿಸಬೇಕು
ಶೂ ಧರಿಸಿದವರೆಲ್ಲ ಶೂರರಲ್ಲ
ಶೂನಿಂದ ಬರುವ ನೋವಿಗೆ ಶೂಲೆ ಎನ್ನಬಹುದು
ವಿಶ್ವನಾಥ ಸುಂಕಸಾಳ