ಹಳ್ಳಿಯೊಂದಕ್ಕೆ ಪ್ರಥಮ ಬಾರಿಗೆ ವಿದ್ಯುತ್ ಸಂಪರ್ಕ ಸಿಗಲಿತ್ತು. ಈ ಸುದ್ದಿ ಕೇಳಿ ಗ್ರಾಮಸ್ಥರೆಲ್ಲರೂ ಸಂತೋಷದಿಂದ ಕೇಕೆ ಹಾಕಿ ಕುಣಿಯತೊಡಗಿದರು. ಅದೇ ಸಮಯದಲ್ಲಿ ನಾಯಿಯೊಂದು ಓಡಿ ಬಂದು ಅವರ ನಡುವೆ ನುಗ್ಗಿ ತಾನೂ ಕುಣಿಯತೊಡಗಿತು. ಗ್ರಾಮಸ್ಥನೊಬ್ಬ ಕೇಳಿದ, 'ಏ ನೀನ್ಯಾಕೋ ಕುಣೀತಾ ಇದೀಯಾ?'
ನಾಯಿ: ವಿದ್ಯುತ್ ಸಂಪರ್ಕ ಕೊಡಬೇಕು ಅಂದ್ರೆ, ವಿದ್ಯುತ್ ಕಂಬಗಳನ್ನೂ ನೆಡುತ್ತಾರಲ್ಲಾ, ನನಗೂ ಲಾಭ ಆಯಿತು! ಹೊಡೀರೀ ಹಲಗೀ....