ಆದಾಯ
ಎಲ್ಲರ ಜೀವನೋಪಾಯ ಈ ಆದಾಯ
ಇದರಲ್ಲಿ ಅರ್ಧ ಬಾಡಿಗೆಗೆ, ಇನ್ನರ್ಧ ಬಾಡಿಗೆ
ಹಂಚಿ ಹೋದ ಆದಾಯಕ್ಕೆ ಚಿಂತಿಸಿ ಫಲವಿಲ್ಲ
ಕೈಗೆ ಬರುವ ಮೊದಲೇ ಇದರ ಹಂಚಿಕೆಯಾಗಿರುತ್ತದೆ
ಮಧ್ಯಮವರ್ಗದವರ ಆದಾಯ ಮದ್ಯಕ್ಕೇ ಸಾಲುವುದಿಲ್ಲ
ವರ್ಷದಿಂದ ವರ್ಷಕ್ಕೆ ಹೆಚ್ಚುವ, ದಿನದಿಂದ ದಿನಕ್ಕೆ ಕ್ಷೀಣಿಸುವ ಹಣ
ಎಲ್ಲ ವರರ ಮಾನ ನಿರ್ಧರಿಸುವ ವರಮಾನ
ಇದೇ ಎಲ್ಲರ ಜೀವನದ ಆಧಾರ ಸ್ತಂಭ. ಸ್ತಂಭ ಗಟ್ಟಿಯಿಲ್ಲದಿದ್ದರೆ ಮೈ ಮೇಲೆ ಬೀಳುವುದು ಖಚಿತ
ಹೆಂಡತಿ ಸೇರಿದ ಗಂಡನ ದುಡಿತಾಯ
ಕಾರು ಕೊಂಡು ಕಾರುಬಾರು ನಡೆಸಲು ಮೂಲಕಾರಣ
ತೆರಿಗೆ ಇಲಾಖೆಯವರು ಪಾಲು ಕೇಳುವ ಭಾಗ
ಹೋದ ಆಯಕ್ಕೆ ವ್ಯಯ ಎನ್ನುವುದಾದರೆ ಬಂದ ಆಯವೇ ಆದಾಯ
ವಿಶ್ವನಾಥ ಸುಂಕಸಾಳ
vishwasunkasal@yahoo.com