ಪವ್ಲೋವ್ ಮತ್ತವನ ಏಕಾಗ್ರತೆ

Updated on: 

ಇವಾನ್ ಪೆಟ್ರೋವಿಕ್ ಪವ್ಲೋವ್ ರಷ್ಯಾದ ಒಬ್ಬ ಪ್ರಖ್ಯಾತ ದೇಹಶಾಸ್ತ್ರಜ್ಞ. ಜೀರ್ಣಾಂಗ ರಸಗ್ರಂಥಿಯ ಬಗ್ಗೆ ನಡೆಸಿದ ಸಂಶೋಧನೆಗಾಗಿ 1904ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಾತ. ಜೀರ್ಣಕ್ರಿಯೆಯಲ್ಲಿ ಎನ್ಜೈಮ್ಸ್(ಜೈವಿಕಯೋಗವಾಹಕಗಳು)ಗಳ ಪಾತ್ರ ಕುರಿತು ಅನೇಕ ಸಂಶೋಧನೆಗಳನ್ನು ಮಾಡಿದ ಕೀರ್ತಿ ಆತನಿಗೆ ಸಲ್ಲುತ್ತದೆ. ಆತನೊಬ್ಬ ಅಸಾಮಾನ್ಯ ಸಂಶೋಧಕನಾಗಿ ಗೋಚರಿಸುತ್ತಾನೆ. ಹೊಸ ಹೊಸ ವಿಧಾನಗಳಿಂದ ಜೀರ್ಣಕ್ರಿಯೆ ಬಗ್ಗೆ ಸಂಶೋಧನೆ ನಡೆಸಿದ್ದಾನೆ. ಉದಾಹರಣೆಗೆ, ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯನ್ನು ಅಭ್ಯಸಿಸಲು ಅವನು ಕಂಡುಕೊಂಡ ಮಾರ್ಗವೆಂದರೆ ಪ್ರಾಣಿಗಳ ಹೊಟ್ಟೆಯನ್ನು ತೆರೆದು ಕಣ್ಣಾರೆ ಅದನ್ನು ವೀಕ್ಷಿಸಿ ಸಂಶೋಧನೆ ಮಾಡುವುದು. ಪ್ರಾಣಿಯೊಂದರ ಜೀರ್ಣಾಂಗ ಕ್ರಿಯೆಯನ್ನು ಅಭ್ಯಸಿಸಲು ಆತ ಹದಿನಾಲ್ಕುವರ್ಷ ಶ್ರಮಿಸಿದ್ದ. ಇಂತಹ ಪ್ರತಿಭಾವಂತ ವಿಜ್ಞಾನಿಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಕೇವಲ ಪ್ರಯೋಗಾಲಯದಲ್ಲಿ ಕಾಲ ಕಳೆಯುತ್ತಿದ್ದ ಆತನಿಗೆ ತನ್ನ ಕುಟುಂಬ ನಿರ್ವಹಣೆಗೆ ಬೇಕಾದ ಸಂಪಾದನೆ ಇರಲಿಲ್ಲ. ಈ ಬಗ್ಗೆ ಅವನ ಪತ್ನಿಗೆ ಅಸಮಾಧಾನವೂ ಇತ್ತು. ಹಲವಾರು ಕಡೆ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಲು ಕರೆಬಂದರೂ ಸಹ ಅದನ್ನವನು ಒಪ್ಪಿಕೊಂಡಿರಲಿಲ್ಲ. ಅವನ ಪ್ರಕಾರ ನೌಕರಿಗೆ ಸೇರುವುದೆಂದರೆ ಸಂಶೋಧನೆಗೆ ತಿಲಾಂಜಲಿಯನ್ನಿತ್ತಂತೆ. ಅಲ್ಲದೆ ಅಲ್ಪ ಧನ ಗಳಿಕೆಗೆ ಅಮೂಲ್ಯವಾದ ಸಮಯವನ್ನು ವ್ಯಯಿಸುವುದು ಆತನಿಗೆ ಇಷ್ಟವಾಗದ ಕೆಲಸ. ಹೀಗಾಗಿ ತನ್ನ ಸಂಪೂರ್ಣ ಸಮಯವನ್ನು ಸಂಶೋಧನೆಗೆ ಮೀಸಲಾಗಿಟ್ಟಿದ್ದ. ಒಮ್ಮೆ ಅಸಮರ್ಪಕ ನಿರ್ವಹಣೆಯಿಂದಾಗಿ ಪವ್ಲೋವ್ ಸಂಶೋಧನೆಗೆಂದು ಸಂಗ್ರಹಿಸಿಟ್ಟಿದ್ದ ಅನೇಕ ಕ್ರಿಮಿಕೀಟಗಳು ಅಸುನೀಗಿದವು. ಅದೇ ಸಮಯಕ್ಕೆ ಪವ್ಲೋವ್‌ನ ಪತ್ನಿ ಆಗಮಿಸಿ, ಪ್ರಾಧ್ಯಾಪಕ ವೃತ್ತಿಯನ್ನು ವಹಿಸಿಕೊಳ್ಳದೇ ಕುಟುಂಬವನ್ನು ಸಂಕಷ್ಟಕ್ಕೆ ದೂಡಿರುವ ಬಗ್ಗೆ ಆಕ್ಷೇಪಿಸಿದಾಗ ಆ ವಿಜ್ಞಾನಿ ಹೇಳಿದ...'ನನ್ನನ್ನು ಒಂಟಿಯಾಗಿ ಬಿಡಿ. ಇಲ್ಲಿ ನಿಜವಾದ ಸಂಕಷ್ಟ ಎದುರಾಗಿದೆ. ನಾನು ಸಂಶೋಧನೆ ನಡೆಸಲು ಸಂಗ್ರಹಿಸಿಟ್ಟಿದ ಎಲ್ಲ ಚಿಟ್ಟೆಗಳೂ ಅಸುನೀಗಿದ್ದರೆ, ನೀನು ಹಣಕಾಸಿನಂತಹ ಅಲ್ಪ ಆಸೆಗೆ ಬಲಿಯಾಗುವುದು ದೊಡ್ಡ ದುರಂತ!'
ಇದು ವಿಜ್ಞಾನಿಯಾದವನು ಹೇಗೆ ತನ್ನ ಕೆಲಸದಲ್ಲಿ ತಲ್ಲೀನನಾಗಿರಬೇಕು ಮತ್ತು ಅಲ್ಪಧನಕ್ಕಾಗಿ ತನ್ನ ಪ್ರತಿಭೆಯನ್ನು ವ್ಯಯಿಸಬಾರದೆಂಬ ಆದರ್ಶ ನಡವಳಿಕೆಯನ್ನು ತೋರಿಸಿಕೊಡುತ್ತದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com