ಬಸ್ (ಬಂದರೆ) ನಿಲ್ಲುವ ತಾಣ
ಇಲ್ಲಿರುವ ಬೆಂಚೂ ಮುರಿದಿರುವುದರಿಂದ ಇದು ನಿಲ್ಲುವ ತಾಣವೇ
ಭಿಕ್ಷುಕರ, ಬೀದಿ ನಾಯಿಗಳ, ಬೀದಿ ಹೋಕರ ಶ್ರಮ ಹೋಗಿಸುವ ಆಶ್ರಮ
ಇದಕ್ಕಿಂತ ಒಂದು ಫರ್ಲಾಂಗ್ ಆಚೆಯೇ ಬಸ್ ನಿಲ್ಲುವುದು
ಕಾಯುವಿಕೆಯ ಕಷ್ಟ ಅರ್ಥವಾಗೋದು ಇಲ್ಲಿಯೇ
ಗ್ರಾಮೀಣ ಬಸ್ ನಿಲ್ದಾಣಗಳಲ್ಲಿ ಜನಕ್ಕಿಂತ ದನಗಳೇ ಜಾಸ್ತಿ
ಇದು ಸಾರ್ವಜನಿಕ ಆಸ್ತಿ. ಎಲ್ಲರಿಗೂ ಹಾಳು ಮಾಡುವ ಹಕ್ಕಿದೆ
ಕೆಲವರ ಮನೆ, ಇನ್ನು ಕೆಲವರ ಶಯ್ಯಾಗೃಹ ಮತ್ತೆ ಕೆಲವರ ಶೌಚಾಲಯ
ಬಸ್ಗಳು ನಿಂತು ಹೋಗುವ ತಾಣ. ಕೆಲವೊಮ್ಮೆ ಪ್ರಾಣವೂ ನಿಂತು ಹೋದಂತೆನಿಸುತ್ತದೆ
ಮಳೆಗಾಲದಲ್ಲಿನ ನಿಲ್ದಾಣಗಳ ದೃಶ್ಯ ವೈಭವ, ಕೆಸರು ಗದ್ದೆಯನ್ನೂ ನಾಚಿಸುವಂತಿರುತ್ತದೆ
ಎಲ್ಲೆಂದರಲ್ಲಿ ಉಗುಳುವ ಮುಕ್ತ ಅವಕಾಶ ನಿಮಗಿಲ್ಲಿದೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com