ಭಟ್ರೆ ಮಳೆ ಬರೀ ಬೆಂಗಳೂರಲ್ಲಷ್ಟೇ ಬರ್ತಾ ಇದೆಯಲ್ಲ, ಇಲ್ಲಿಗೂ ಸ್ವಲ್ಪ ಕಳಿಸಿಕೊಡ್ತೀರಾ?
ಮಳೆ ಹುಡುಗಿನ್ನೇ ನಿಮ್ಮೂರಿಗೆ ಕಳಿಸಿದ್ವಲ್ಲ ಮಾರಾಯ, ವಾಪಸ್ ಕಳುಹಿಸಿಬಿಟ್ರಿ!
ಪ್ರಮೋದ್ ಕುಮಾರ್, ಎಚ್ಆರ್ಬಿ ಲೇಔಟ್, ರಾಯಚೂರು
ಸ್ನೇಹದಿಂದ ಜಗತ್ತಾ? ಪ್ರೀತಿಯಿಂದ ಜಗತ್ತಾ?
ಜಗತ್ತು ಇರುವುದರಿಂದ ಪ್ರೀತಿ, ಸ್ನೇಹ ಎಲ್ಲಾ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪತ್ನಿಯನ್ನು ಪ್ರೀತಿಯಿಂದ 'ಕಿಚನ್ ಕ್ವೀನ್' ಅಂತಾನೂ ಕರೆಯಬಹುದಲ್ವೇ?
ಹಾಗಂದ ತಕ್ಷಣ ಅವಳು ಬೇಗ ಮಾಡು 'ಕಿಚನ್ ಕ್ಲೀನ್' ಅಂದಾಳು ಹುಶಾರ್.
ಮದುವೆ ಆದವನಿಗೆ ಹೆಂಡ್ತಿ- ಮಕ್ಕಳ ಚಿಂತೆ. ಮದುವೆ ಆಗದವನಿಗೆ?
ಹೆಂಡತಿ ಆಗುವವಳ ಚಿಂತೆ!
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಕೆಲವು ಮನೆಗಳಲ್ಲಿ ಮಡದಿಯರು ಸರ್ವಾಧಿಕಾರಿಯಂತೆ ವರ್ತಿಸುತ್ತಾರಲ್ಲಾ?
ಉಳಿದ ಮನೆಗಳಲ್ಲಿ ಗಂಡಸರು ಸುಮ್ಮನೆ ಹೊಂದಿಕೊಂಡಿರುತ್ತಾರೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
-ಬಾಣಭಟ್ಟ