- ಬಾಟಲ್‌ನಲ್ಲಿ ಶಾಂಪು ಖಾಲಿ ಆದರೂ ಕೂಡ ಅದರಲ್ಲಿ ನೀರು ಹಾಕಿ, ಅಲ್ಲಾಡಿಸಿ, ಎರಡೆರಡು ದಿನ ತಲೆ ತೊಳೆದುಕೊಳ್ಳುತ್ತೀರಿ ಅಂದರೆ...
- ಟೂಥ್ ಪೇಸ್ಟ್ ಖಾಲಿಯಾದರೂ ಟ್ಯೂಬ್ ಅನ್ನು ಹಿಂದಿನಿಂದ ಮಡಚಿ, ಹಿಚುಕಿ, ಕೊನೆಗೆ ಹೊರಗೆ ಏನೂ ಬರದಿದ್ದರೆ ಅದನ್ನು ಹರಿದು, ಅಳಿದುಳಿದ ಪೇಸ್ಟ್‌ಗಾಗಿ ಹುಡುಕುತ್ತೀರೆಂದರೆ...
- ಚಿನ್ನ ತೆಗೆದುಕೊಳ್ಳದಿದ್ದರೂ ಚಿನ್ನದ ಬೆಲೆ ಏರಿದಾಗ ಟೆನ್ಶನ್ ಮಾಡಿಕೊಂಡರೆ...
- ಬ್ಯಾಟರಿ ಹಾಳಾಗಿದೆ ಅಂತ ಗೊತ್ತಿದ್ದರೂ ಅದನ್ನು ಚೇಂಜ್ ಮಾಡದೆ ಟಿ.ವಿ. ರಿಮೋಟನ್ನು ತಟ್ಟುತ್ತಾ ಗೊಣಗುತ್ತೀರೆಂದರೆ....
- ಟೀಶರ್ಟ್ ಹಳೆಯದಾದಾಗ ಅದನ್ನು ನೈಟ್ ಡ್ರೆಸ್‌ನಂತೆ ಬಳಸಿ, ಇನ್ನಷ್ಟು ಹಳೆಯದಾದ ಮೇಲೆ ಹೋಲಿ ಆಡಲು ಹಾಕಿಕೊಂಡು, ನಂತರ ಅದನ್ನು ಮನೆ ಒರೆಸುವ ಬಟ್ಟೆಯಾಗಿ ಬಳುಸುತ್ತೀರೆಂದರೆ...
'ನೀವು ನಿಜವಾದ ಭಾರತೀಯರು!'