ಕಂಪ್ಯೂಟರ್ಗೆ ವೈರಸ್ ಅಂಟಿಕೊಂಡರೆ ಆ್ಯಂಟಿ ವೈರಸ್ನಿಂದ ತೆಗೆಯಬಹುದು. ಪ್ರೀತಿಗೆ ವೈರಸ್ ಅಂಟಿಕೊಂಡರೆ?
ಆಂಟಿ ವೈರಸ್ ಟ್ರೈ ಮಾಡಿನೋಡು.
ಫ್ಯಾಷನ್ ಡಿಸೈನರ್ ಮಧು, 9945737427
ಹೆಂಡತಿಗೆ ಗಂಡ ಸತ್ತು ಹೋದರೆ ವಿಧವೆ. ಅದೇ ಗಂಡನಿಗೆ ಹೆಂಡತಿ ಸತ್ತು ಹೋದರೆ?
ಮರು ಮದುವೆ.
ರಮೇಶ ಭಟ್ ಆವರ್ಸೆ ಮೈಸೂರು, 9164276058
ಪ್ರಣತಿಯನ್ನು ಕಂಡಕಂಡವರೆಲ್ಲ 'ಐ ಲವ್ ಯೂ' ಅಂತಿದಾರಲ್ಲ. ನಿಮ್ಮ ಮನಸ್ಸಿಗೆ ನೋವಾಗಲ್ವಾ ಭಟ್ರೇ?
ನಿನಗೇ ತುಂಬಾ ನೋವಾದ ಹಾಗಿದೆಯಲ್ಲಾ? ಏನ್ ವಿಷಯ?!
ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ಓಟು ಬೇಡುವವರಿಗೂ, ಭಿಕ್ಷೆ ಬೇಡುವವರಿಗೂ ಇರುವ ವ್ಯತ್ಯಾಸವೇನು?
ಓಟು ಬೇಡುವವನನ್ನು ನಾಯಕ ಅಂತೀವಿ, ಪಾಪ ಭಿಕ್ಷೆ ಬೇಡುವವನನ್ನು ನಾಲಾಯಕ ಅಂತೀವಿ!
ರವಿಕುಮಾರ್ ಜಿ.ಬಿ. ಬೆಂಗಳೂರು
ಭೂಮಿಯ ಕಂಪನ ಹೆಚ್ಚೋ, ಪ್ರೀತಿಯ ಕಂಪನ ಹೆಚ್ಚೋ?
ಇನ್ನೂ ಬಂದಿಲ್ಲ ಮಾಪನ, ಪತ್ತೆಹಚ್ಚಲು ಪ್ರೀತಿಯ ಕಂಪನ!
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
-ಬಾಣಭಟ್ಟ