ಮ್ಯೂಸಿಯಂ ಸ್ಥಾಪನೆಗಾಗಿ ಹಣ ವಿನಿಯೋಗ

ಫ್ರಾನ್ಸ್ ದೇಶದಲ್ಲಿ ಜನಿಸಿ, ಬ್ರಿಟಿಷ್ ನಾಗರಿಕತ್ವವನ್ನು ಪಡೆದು, ತನ್ನ ಆಸ್ತಿಯನ್ನೆಲ್ಲವನ್ನೂ ಅಮೆರಿಕದಲ್ಲಿ ವಿನಿಯೋಗಿಸಿದ ವಿಚಿತ್ರ...
Updated on: 

ಫ್ರಾನ್ಸ್ ದೇಶದಲ್ಲಿ ಜನಿಸಿ, ಬ್ರಿಟಿಷ್ ನಾಗರಿಕತ್ವವನ್ನು ಪಡೆದು, ತನ್ನ ಆಸ್ತಿಯನ್ನೆಲ್ಲವನ್ನೂ ಅಮೆರಿಕದಲ್ಲಿ ವಿನಿಯೋಗಿಸಿದ ವಿಚಿತ್ರ ವಿಜ್ಞಾನಿ ಜೇಮ್ಸ್ ಸ್ಮಿತ್ ಸೋನಿಯನ್. ರಸಾಯನ ಶಾಸ್ತ್ರ ಮತ್ತು ಖನಿಜಶಾಸ್ತ್ರದಲ್ಲಿ ಪರಿಣಿತನಾದ ಜೇಮ್ಸ್ 27ಕ್ಕೂ ಹೆಚ್ಚು ಪ್ರೌಢ ಪ್ರಬಂಧವನ್ನು ಮಂಡಿಸಿದ್ದಾನೆ. ಅಮೆರಿಕದಲ್ಲಿ ಒಂದು ಜನೋಪಯೋಗಿ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಉಯಿಲು ಬರೆದು 1829ರಲ್ಲಿ ಮರಣಿಸಿದನು. ಅವನ ಆಶೋತ್ತರದಂತೆ 1846 ರಲ್ಲಿ ಸ್ಮಿತ್ ಸೋನಿಯನ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ತಾನು ಸಂಗ್ರಸಿಟ್ಟಿದ್ದ 5ಲಕ್ಷ ಡಾಲರಿಗೂ ಹೆಚ್ಚಿನ ಹಣವನ್ನು ಅಮೆರಿಕದಲ್ಲಿ ಮ್ಯೂಸಿಯಂ ಸ್ಥಾಪಿಸಲು ವಿನಿಯೋಗಿಸಬೇಕೆಂಬುದು ಅವನ ಆಶಯವಾಗಿತ್ತು. ಅದರಂತೆ ಒಟ್ಟು ಹತ್ತೊಂಬತ್ತು ವಸ್ತು ಸಂಗ್ರಹಾಲಯಗಳು ಅಮೆರಿಕದಾದ್ಯಂತ ಸ್ಥಾಪನೆಗೊಂಡು ಸ್ಮಿತ್‌ನ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಭಾರತೀಯ ವಸ್ತುಗಳಿಗೆ ಪ್ರಾಮುಖ್ಯತೆ ನೀಡಿದ ಬಾಸ್ಟನ್‌ನ ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್, ನ್ಯೂಯಾರ್ಕ್‌ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್, ಮ್ಯೂಸಿಯಂ ಆಫ್ ಪ್ರಿಮಿಟಿವ್ ಆರ್ಟ್ ಪ್ರಮುಖವಾದುದು. ಅದೇ ರೀತಿ ಪೆನ್ಸಿಲ್ವೇನಿಯಾ, ಫಿಲಿಡೆಲ್ಫಿಯಾಗಳಲ್ಲಿಯೂ ವಸ್ತು ಸಂಗ್ರಹಾಲಯಗಳು ಸ್ಥಾಪನೆಗೊಂಡವು. ಈ ಸಂಗ್ರಹಾಲಯಗಳಲ್ಲಿ 142 ಮಿಲಿಯನ್‌ನಷ್ಟು ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಅದರ ಜೊತೆ ಸ್ಮಿತ್‌ನ ಮೂಳೆಗಳೂ ಸೇರಿವೆ. ಅಲ್ಲದೆ ನಾಲ್ಕು ಸಂಶೋಧನಾ ಕೇಂದ್ರಗಳು, ರಾಷ್ಟ್ರೀಯ ಮೃಗಾಲಯ, ಅನೇಕ ಪುಸ್ತಕ ಭಂಡಾರಗಳು ಮತ್ತು ಒಂದು ಪತ್ರಿಕೆ ಸ್ಥಾಪಿಸಲಾಗಿದ್ದು ಸಹಸ್ರಾರು ಜನ ಇದರ ಉಪಯೋಗ ಪಡೆಯುತ್ತಿದ್ದಾರೆ. ಸ್ಮಿತ್ ಏಕೆ ಅಮೆರಿಕದಲ್ಲಿ ತನ್ನ ಸಂಸ್ಥೆ ಸ್ಥಾಪಿಸಲು ಇಚ್ಛಿಸಿದನೋ ಗೊತ್ತಿಲ್ಲ. ಅದೊಂದು ಅಪರೂಪದ ಘಟನೆಯಾಗಿದೆ. ಏಕೆಂದರೆ ಸ್ಮಿತ್ ತನ್ನ ಜೀವಿತ ಸಮಯದಲ್ಲಿ ಎಂದಿಗೂ ಅಮೆರಿಕವನ್ನು ಸಂದರ್ಶಿಸಿರಲಿಲ್ಲ ಅಥವಾ ಅವನಿಗೆ ಅಲ್ಲಿನ ಯಾರೊಡನೆಯೂ ಒಡನಾಟವಿರಲಿಲ್ಲ. ಇಂದು ವಿಶ್ವದ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯದ ಸಂಕೀರ್ಣವನ್ನು ಈ ಸಂಸ್ಥೆ ಸ್ಥಾಪಿಸಿದೆ. ದುರಂತವೆಂದರೆ ಸ್ಮಿತ್ ಸೋನಿಯನ್‌ನ ಖಾಸಗಿ ಡೈರಿ, ಅವನು ಪ್ರಬಂಧಗಳ ದಾಖಲೆ, ಅವನು ಸಂಗ್ರಹಿಸಿದ ಖನಿಜಗಳ ಸಂಗ್ರಹ ಮತ್ತಿತರ ಖಾಸಗಿ ವಸ್ತುಗಳು ಬೆಂಕಿಗಾಹುತಿಯಾಗಿ ನಾಶವಾಗಿವೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com