(ಗಂಡ-ಹೆಂಡತಿ ಜೊತೆಯಲ್ಲಿ ಕುಳಿತು ಕ್ರಿಕೆಟ್ ನೋಡುತ್ತಿರುತ್ತಾರೆ.)
ಹೆಂಡತಿ: ಇವ್ನು ಧೋನಿ ಅಲ್ವಾ?
ಗಂಡ: ಅಲ್ಲ, ಲಸಿತ್ ಮಲಿಂಗ. ಧೋನಿ ವಿಕೆಟ್ ಕೀಪರ್ರು..
ಹೆಂಡತಿ: ಅಯ್ಯೋ ಇನ್ನೊಂದು ವಿಕೆಟ್ ಬಿತ್ತು!
ಗಂಡ: ಅದು ರೀಪ್ಲೇ..ಆವಾಗ ಔಟಾಗಿದ್ದನ್ನೇ ಈಗ್ಲೂ ತೋರಿಸ್ತಾ ಇದಾರೆ.
ಹೆಂಡತಿ: ಇಂಡಿಯಾ ಗೆಲ್ಲಬಹುದು ಅಲ್ವಾ?
ಗಂಡ: ಇದು ಆಸ್ಟ್ರೇಲಿಯಾ ಗಡ ಶ್ರೀಲಂಕಾ ಮ್ಯಾಚು. ಇನ್ನು 20 ರನ್ನು ಬೇಕು ಗೆಲ್ಲೋಕೆ.
ಹೆಂಡತಿ: ಒಂದು ಸಿಕ್ಸ್ ಹೊಡೆದರೆ ಗೆಲ್ತಾರೆ ಅಲ್ವಾ?
(ಗಂಡ ಸಿಟ್ಟಿನಿಂದ ಚಾನೆಲ್ ಬದಲಾಯಿಸುತ್ತಾನೆ. ಹೆಂಡತಿ ಸೀರಿಯಲ್ ನೋಡತೊಡಗುತ್ತಾಳೆ)
ಗಂಡ: ಸೀರಿಯಲ್ ಹೆಸರೇನು?
ಹೆಂಡತಿ: ಶ್...ಡಿಸ್ಟರ್ಬ್ ಮಾಡ್ಬೇಡಿ!