'ವಿಧಾನ ಸೌಧಾನಾ ತಲೆ ಮೇಲೆ ಹೊತ್ಕೊಂಡು ಮಂಡ್ಯದವರೆಗೂ ನಡೀತೀನಿ' ಅಂತ ಕೋಲ್ಯ ಚಾಲೆಂಜ್ ಮಾಡಿದ. ಮರುದಿನ ಮಾಧ್ಯಮ ವರದಿಗಾರರೆಲ್ಲರೂ ವಿಧಾನ ಸೌಧದ ಮುಂದೆ ಜಮಾಯಿಸಿಬಿಟ್ಟರು.
ಕೋಲ್ಯ: ಎಲ್ಲರೂ ರೆಡಿ ಇದೀರಾ ತಾನೆ?
ವರದಿಗಾರರು(ಒಕ್ಕೊರಲಿನಿಂದ): ಹೂಂ...
ಕೋಲ್ಯ: ಹಾಗಿದ್ರೆ ಇದನ್ನ ಸ್ವಲ್ಪ ಎತ್ತಿ ನನ್ನ ತಲೆ ಮೇಲೆ ಇಟ್ಬಿಡಿ...!
----
ವರದಿಗಾರ: ನೀವು ನಿಮ್ಮ ಹೆಂಡತಿಯ ಜೊತೆಗೆ ಪಾತ್ರೆ ತೊಳೀತೀರಿ ಅಂತ ಸುದ್ದಿ ಹಬ್ಬಿದೆ. ನಿಜಾನಾ?
ಕೋಲ್ಯ: ಅದರಲ್ಲೇನು ತಪ್ಪು? ನನ್ನ ಹೆಂಡತಿ ನನ್ನ ಜೊತೆಗೆ ಅಡುಗೆ ಮಾಡ್ತಾಳಲ್ಲ!