ಎ: ಆ ಹುಡುಗನ್ನ ನೋಡು...ಅದೇ ನೀಲಿ ಜೀನ್ಸ್ ಮತ್ತು ಶಾರ್ಟ್ ಹೇರ್ಕಟ್ ಮಾಡ್ಸಿದಾನಲ್ಲ.. ಮೊದಲು ಅವನನ್ನ ನೋಡಿ ಹುಡುಗಿ ಅನ್ಕೊಂಬಿಟ್ಟಿದ್ದೆ!
ಬಿ: ಅದು ಹುಡುಗೀನೇ. ಆಕೆ ನನ್ನ ಮಗಳು...
ಎ: ಓಹ್, ಕ್ಷಮಿಸಿಬಿಡಿ ಸರ್. ನೀವು ಆಕೆ ತಂದೆ ಅಂತ ನನಗೆಗೊತ್ತಾಗ್ಲಿಲ್ಲ...
ಬಿ: ನಾನು ಆಕೆ ತಂದೆ ಅಲ್ಲ...ತಾಯಿ!
----
ವರದಿಗಾರ: ನಿಮ್ಮ ಹೆಂಡತಿ ಏಕೆ ಓಡಿಹೋದ್ರು?
ಕೋಲ್ಯ: ಗೊತ್ತಿಲ್ಲ! ನಾನು ಬಾತ್ರೂಮ್ಗೆ ಸ್ನಾನ ಮಾಡೋಕ್ಕೆ ಅಂತ ಹೋಗಿದ್ದೆ. ಅವಳು ಓಡಿಹೋದ್ಲು...
ವರದಿಗಾರ: ಬಹುಶಃ ಈ ಸಮಯಕ್ಕಾಗಿ ಅವರು ಎಷ್ಟು ವರ್ಷದಿಂದ ಕಾದಿದ್ರೋ ಏನೋ!
--
ಕೋಲ್ಯ: ಸರಾಯಿಯನ್ನು ಕಾಲಿಂದ ಮುಟ್ಟಿದ್ರೂ ನರಕಕ್ಕೆ ಹೋಗ್ತೀವಿ...
ಕುಡುಕ: ಅಷ್ಟು ಪವಿತ್ರವಾದದ್ದನ್ನು ಕಾಲಿಂದ ಮುಟ್ಟಿದ್ರೆ. ನರಕಕ್ಕೆ ಹೋಗ್ದೆ ಇನ್ನೆಲ್ಲಿ ಹೋಗ್ತಾರೆ ಸಾರ್? ಹಿಕ್!