ಮೊದಲ ರಾತ್ರಿ ಕೋಲ್ಯ ತನ್ನ ಹೆಂಡತಿಗೆ ಪ್ರೀತಿಯಿಂದ ಹೇಳಿದ- 'ನೋಡು, ಮನೆಯಲ್ಲಿ ಎಲ್ಲರ ಜೊತೇನೂ ಹೊಂದಿಕೊಂಡು ಹೋಗು, ಯಾರ ಜೊತೇನೂ ಜಗಳ ಮಾಡಬೇಡ. ಜೀವನದಲ್ಲಿ ಪ್ರೀತಿ ಒಂದೇ ಶಾಶ್ವತವಾಗಿ ಉಳಿಯೋದು. ಮೋಹ, ಮದ, ಮತ್ಸರದಿಂದ ಮನುಷ್ಯನಿಗೆ ನೆಮ್ಮದಿ ಸಿಗೋದಿಲ್ಲ...'
ಕೋಲ್ಯ ಮಾತು ಮುಗಿಸುವುದರೊಳಗೆ ಅವನ ಹೆಂಡತಿ ಓಡಿ ಹೋಗಿ ಕೋಣೆಯ ಬಾಗಿಲು ತೆರೆದು ಕೂಗಿದಳು- 'ಎಲ್ರೂ ಒಳಗೆ ಬನ್ನಿ...ಶ್ರೀ ಶ್ರೀ ಕೋಲ್ಯಾನಂದ ಮಹಾಸ್ವಾಮಿಗಳ ಪ್ರವಚನ ನಡೀತಿದೆ!'